ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಓಲೈಕೆ ರಾಜಕಾರಣ: ಎಚ್.ಈ. ಜ್ಞಾನೇಶ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:27 IST
Last Updated 24 ಡಿಸೆಂಬರ್ 2025, 5:27 IST
ಸೊರಬ ತಾಲ್ಲೂಕು‌ ಬಿಜೆಪಿ‌ ಮಂಡಲದ ವತಿಯಿಂದ ಪ್ರತಿಭಟನಾ ಮೆರೆವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು
ಸೊರಬ ತಾಲ್ಲೂಕು‌ ಬಿಜೆಪಿ‌ ಮಂಡಲದ ವತಿಯಿಂದ ಪ್ರತಿಭಟನಾ ಮೆರೆವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು   

ಸೊರಬ: ರಾಜ್ಯ ಸರ್ಕಾರ ಓಲೈಕೆ ರಾಜಕಾರಣಕ್ಕಾಗಿ ಪ್ರಚೋದನಕಾರಿ ಹಾಗೂ ದ್ವೇಷ ಬಾಷಣದ ವಿರುದ್ಧ ವಿದೇಯಕಗಳನ್ನು ಜಾರಿಗೆ ತಂದು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಮುಖಂಡ ಎಚ್.ಈ ಜ್ಞಾನೇಶ್ ಆರೋಪಿಸಿದರು.

ಪಟ್ಟಣದ ಪುರಸಭೆ ಮುಂಬಾಗ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ‘ದ್ವೇಷ ಬಾಷಣ ಮತ್ತು ಅಪರಾಧಗಳ ಪ್ರತಿಬಂದಕ ಕಾಯ್ದೆ ವಿರುದ್ಧ ಮಂಗಳವಾರ ತಾಲ್ಲೂಕು ಬಿಜೆಪಿ ಮಂಡಳದ ವತಿಯಿಂದ ನಡೆದ ಪ್ರತಿಭಟನೆಯ ನೇತೃತತ್ವ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಅಧಿಕಾರಕ್ಕಾಗಿ ನಾಯಕರ ನಡುವೆ ಸಮರ ನಡೆಯುತ್ತಿದೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಹಂಚಿಕೆಯ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಹೇಳಿಕೆ ಹಾಸ್ಯಾಸ್ಪದ. ರಾಜ್ಯದಲ್ಲಿ ಕಾಂಗ್ರೆಸ್ ದುರಾಢಳಿತದ ವಿರುದ್ಧ ಪ್ರಶ್ನೆ ಮಾಡುವ ಅಧಿಕಾರ ವಿರೋಧ ಪಕ್ಷವಾದ ಬಿಜೆಪಿಗೆ ಇದೆ. ವಿರೋಧ ಪಕ್ಷಗಳ ಪ್ರತಿಭಟನೆ ಹಾಗೂ ವಾಕ್ ಸ್ವಾತಂತ್ರವನ್ನು ಹತ್ತಿಕ್ಕಲು ಕಾಂಗ್ರೆಸ್ ಮಸೂಧೆಗಳ ಕಾನೂನು ಚೌಕಟ್ಟನ್ನು ತಂದಿರುವುದು ವಿಪರ್ಯಾಸ ಎಂದು ಆಕ್ರೋಶ ಹೊರಹಾಕಿದರು.

ADVERTISEMENT

ಕಾಂಗ್ರೆಸ್ ಸರ್ಕಾರ ತಮ್ಮ ಲೋಪದೋಷಗಳನ್ನು ಮರೆ ಮಾಚಿಸಿಕೊಳ್ಳಲು ಅವೈಜ್ಞಾನಿಕ ವಿಧೇಯಕಗಳನ್ನು ಜಾರಿಗೆ ತಂದು ವಿರೋಧ ಪಕ್ಷಗಳ ಹೋರಾಟ ಹತ್ತಿಕ್ಕಲು ಹುನ್ನಾರ ರೂಪಿಸಿರುವುದು ದುರಾದೃಷ್ಟಕರ ಎಂದು ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ. ತಲ್ಲೂರು ಆರೋಪಿಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ ಅಗಸನಹಳ್ಳಿ ಮಾತನಾಡಿದರು.

ಗುರುಪ್ರಸನ್ನ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ತಾಲ್ಲೂಕು ಘಕಟದ ಮಹಿಳಾ ಅಧ್ಯಕ್ಷೆ ಹೋಳಿಯಮ್ಮ, ಪ್ರಧಾನ ಕಾರ್ಯದರ್ಶಿ ಸುರೇಶ್ ಉದ್ರಿ , ಪಾಣಿ ರಾಜಪ್ಪ , ಪ್ರಕಾಶ್ ತಲಕಾಲಕೊಪ್ಪ, ರಾಜು ಮಾವಿನಬಳ್ಳಿಕೊಪ್ಪ, ನಿರಂಜನ್ ಕುಪ್ಪಗಡ್ಡೆ, ಗಜಾನನರಾವ್ ಉಳವಿ, ಪ್ರಭು ಪಿ. ಅರಳೇಶ್ವರದ, ಆಶೀಕ್, ಮಧುರಾಯ್ ಜಿ ಶೇಟ್, ನಟರಾಜ್, ವಿಜಯೇಂದ್ರ ಗೌಡ, ಗೌರಮ್ಮ ಬಂಡಾರಿ, ಜಗದೀಶ್ ಗೆಂಡ್ಲ ಹೊಸೂರು, ಸುಧೀರ್ ಪೈ, ಕೇಶವ ಪೇಟ್ಕರ್, ಡಿ. ಶಿವಯೋಗಿ, ಪರಶುರಾಮಪ್ಪ, ಪ್ರಭು, ಯಶೋಧರ್, ಬೆನಕೇಶ್, ಮೋಹನ್, ಜಗದೀಶ್, ಲಿಂಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.