ADVERTISEMENT

ಸೊರಬ| ಕಾರ್ಮಿಕರಿಗೆ ಸವಲತ್ತು ನೀಡಲು ಬದ್ಧ; ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:17 IST
Last Updated 26 ಜನವರಿ 2026, 6:17 IST
ಸೊರಬ ಪಟ್ಟಣದಲ್ಲಿ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿದ ಸಚಿವ ಮಧು ಬಂಗಾರಪ್ಪ 
ಸೊರಬ ಪಟ್ಟಣದಲ್ಲಿ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿದ ಸಚಿವ ಮಧು ಬಂಗಾರಪ್ಪ    

ಸೊರಬ: ಕಾರ್ಮಿಕರ ಜೀವನೋಪಾಯಕ್ಕೆ ಅನೇಕ ಸವಲತ್ತು ಒದಗಿಸಲು ಸರ್ಕಾರ ಮುಂದಾಗಿದ್ದು, ₹2 ಲಕ್ಷ ಇದ್ದ ಆರೋಗ್ಯ ವಿಮೆಯನ್ನು ₹8 ಲಕ್ಷಕ್ಕೆ ಏರಿಸುವ ಚಿಂತನೆ ನಡೆಸಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಾಜ್ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಟೂಲ್ ಕಿಟ್ ಹಾಗೂ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದರು.

ಕಾರ್ಮಿಕರಿಗೆ ಸ್ವಂತ ನೆಲೆಯಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಸರ್ಕಾರ ನೀಡುತ್ತಿರುವ ಅನುದಾನ ಕಡಿಮೆ ಇದ್ದು, ಅದರಲ್ಲಿ ಉತ್ತಮವಾದ ಮನೆ ಕಟ್ಟಲು ಸಾಧ್ಯವಿಲ್ಲ‌. ಬೇರೆಯವರ ಮನೆ ನಿರ್ಮಿಸಲು ಶ್ರಮಪಡುತ್ತಿರುವ ಕಾರ್ಮಿಕ ವರ್ಗಕ್ಕೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಹೆಚ್ಚುವರಿ ಅನುದಾನ ನೀಡುವಂತೆ ಅಧಿವೇಶನದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಮುಖ್ಯಮಂತ್ರಿ ಗಮನಕ್ಕೆ ತಂದು‌ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದರು.

ADVERTISEMENT

ಕಾರ್ಮಿಕರ ‌ಹಲವು ಬೇಡಿಕೆಗಳನ್ನು ಈಡೇರಿಸಲು ಸಚಿವರೊಂದಿಗೆ ಚರ್ಚಿಸುತ್ತೇನೆ. ನಿವೃತ್ತಿ ಹೊಂದಿದ ಕಾರ್ಮಿಕರಿಗೆ ₹3 ಸಾವಿರ ಪಿಂಚಣಿ ನೀಡುವ ಬಗ್ಗೆ ಹಾಗೂ ಆರೋಗ್ಯ ವಿಮೆಯನ್ನುಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಹಿರಿಯ ಮುಖಂಡ ತಬಲಿ ಬಂಗಾರಪ್ಪ, ತಾ.ಪಂ ಮಾಜಿ ಸದಸ್ಯ ಗಣಪತಿ ಎಚ್. ಹುಲ್ತಿಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾರಲಘಟ್ಟ, ಗ್ಯಾರಂಟಿ ಅನುಷ್ಠಾನ ಯೋಜನೆ ಸಮಿತಿ ಅಧ್ಯಕ್ಷ ಜಯಶೀಲ ಗೌಡ, ಆನವಟ್ಟಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸದಾನಂದ ಗೌಡ, ಆಶ್ರಯ ಸಮಿತಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ನಾಗರಾಜ್ ಚಿಕ್ಕಸವಿ, ಹಿರಿಯಣ್ಣ ಕಲ್ಲಂಬಿ, ಅತಿಖೂರ್ ರೆಹಮಾನ್, ಸಂಕೇಶ್ ಬಿಳವಾಣಿ, ಬಸವೇಶ್ವರ, ತಾ.ಪಂ ಇಓ ಶಶಿಧರ್, ಕಾರ್ಮಿಕ ಇಲಾಖೆ ನಿರೀಕ್ಷಕಿ ಶಿಲ್ಪಾ.ಬಿ, ರತ್ನಮ್ಮ, ಶಿವಪ್ಪ, ಚಿನ್ನಪ್ಪ, ಪಾಂಡು ಸೇರಿದಂತೆ ಮತ್ತಿತರರಿದ್ದರು.

ತಾಲ್ಲೂಕಿನಲ್ಲಿ 12120 ನೋಂದಾಯಿತ ಕಾರ್ಮಿಕರಿದ್ದು ಸಮುದಾಯ ಭವನ ನಿರ್ಮಾಣದ ಪ್ರಸ್ತಾಪ ಬಂದಿದೆ. ಈ ಕುರಿತು ತಹಶೀಲ್ದಾರ್ ಬಳಿ ಚರ್ಚಿಸಲಾಗುವುದು.‌ ಶಾಸಕರ ಅನುದಾನದಲ್ಲೂ ಹಣ ನೀಡಲು ಬಗ್ಗೆ ಚರ್ಚಿಸಲಾಗುವುದು
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.