ADVERTISEMENT

ನಾಳೆ ‘ಭಾರತೀಯರ ನಡೆ ಸದ್ಭಾವನದೆಡೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 13:31 IST
Last Updated 20 ಡಿಸೆಂಬರ್ 2019, 13:31 IST

ಶಿವಮೊಗ್ಗ: ಅಂಬೇಡ್ಕರ್ ಭವನದಲ್ಲಿ ಡಿ.22ರಂದು ಬೆಳಿಗ್ಗೆ 10.30ಕ್ಕೆ ‘ಭಾರತೀಯರ ನಡೆ ಸದ್ಭಾವನದೆಡೆ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸದ್ಬಾವನಾ ವೇದಿಕೆ, ಗಾಂಧಿಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ,ಕರ್ನಾಟಕಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸುವರು. ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸುವರು. ಕರ್ನಾಟಕಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿಇಂದಿರಾ ಕೃಷ್ಣಪ್ಪ ಭಾಗವಹಿಸುವರು. ಸದ್ಬಾವನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞ ಉಪನ್ಯಾಸ ನೀಡುವರು ಎಂದು ವೇದಿಕೆ ಅಧ್ಯಕ್ಷ ಎಸ್.ಬಿ.ಅಶೋಕ್ ಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಲ್ಲ ಜನಾಂಗಗಳ ನಡುವೆ ಸಾಮರಸ್ಯ ಮೂಡಿಸುವುದು.ತೊಂದರೆಗೆ ಒಳಗಾದವರಿಗೆ ಸ್ಪಂದಿಸುವುದು.ನ್ಯಾಯ ಒದಗಿಸುವುದು, ದುಖಃದಲ್ಲಿರುವವರಿಗೆ ಸಹಾನುಭೂತಿ ತೋರುವುದು.ಶಾಂತಿ ಕಾಪಾಡುವುದು. ನ್ಯಾಯಕ್ಕಾಗಿ ಆಗ್ರಹಿಸುವುದು ವೇದಿಕೆ ಉದ್ದೇಶ. ಅದಕ್ಕಾಗಿ ಈಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿವೇದಿಕೆ ಪ್ರಮುಖರಾದವಾಸುದೇವ್, ಅಬ್ದುಲ್ ಮುಜೀದ್, ಕಾಂತೇಶ್ ಕದರಮಂಡಲಗಿ, ಶ್ರೀನಿವಾಸ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.