ADVERTISEMENT

ಬಸ್ ಪಲ್ಟಿ: ಚಾಲಕ, ನಿರ್ವಾಹಕ, ಪ್ರಯಾಣಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 15:34 IST
Last Updated 4 ಆಗಸ್ಟ್ 2023, 15:34 IST
ಸಾಗರ ತಾಲ್ಲೂಕಿನ ಉಳ್ಳೂರು ಸಮೀಪದ ಸಂಪಿಗೆಸರದ ಬಳಿ ಶುಕ್ರವಾರ ಸರ್ಕಾರಿ ಬಸ್ ಪಲ್ಟಿಯಾಗಿದೆ.
ಸಾಗರ ತಾಲ್ಲೂಕಿನ ಉಳ್ಳೂರು ಸಮೀಪದ ಸಂಪಿಗೆಸರದ ಬಳಿ ಶುಕ್ರವಾರ ಸರ್ಕಾರಿ ಬಸ್ ಪಲ್ಟಿಯಾಗಿದೆ.   

ಸಾಗರ: ತಾಲ್ಲೂಕಿನ ಉಳ್ಳೂರು ಸಮೀಪದ ಸಂಪಿಗೆಸರದ ಬಳಿ ಶುಕ್ರವಾರ ಸರ್ಕಾರಿ ಬಸ್ ಪಲ್ಟಿಯಾಗಿದೆ. ಎದುರಿನಿಂದ ಬಂದ ಬೈಕ್ ತಪ್ಪಿಸಲು ಹೋಗಿ ಚಾಲಕ ಬಸ್ ಅನ್ನು ರಸ್ತೆಯ ಪಕ್ಕಕ್ಕೆ ತೆಗೆದುಕೊಂಡು ಹೋದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಬಸ್ ಚಾಲಕ, ನಿರ್ವಾಹಕ ಹಾಗೂ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT