ಶಿವಮೊಗ್ಗ: ನಗರದ ಪೆಸಿಟ್ ಕಾಲೇಜಿನ ಮುಂಭಾಗದಲ್ಲಿ ಚಿಕ್ಕೋಡಿ ಭಾಗದ ಸಂಚಾರಿ ಕುರುಬರು ಹಾಕಿರುವ ಟೆಂಟ್‌ನಲ್ಲಿ 70 ಕುರಿಗಳು ಸಾವನ್ನಪಿವೆ.
ಸಾವಿಗೆ ಕಾರಣ ತಿಳಿದುಬಂದಿಲ್ಲ. ಘಟನೆ ನಡೆದು ಎರಡು ದಿನಗಳಾದರೂ ಪಶು ಅಧಿಕಾರಿಗಳಾಗಲಿ ಯಾರೂ ಇದುವರೆಗೂ ಸ್ಪಂದಿಸಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಕಾರಣ ಗೊತ್ತಾಗಲಿದೆ
ಹಾಲುಮತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಪ್ರಶಾಂತ್ ‘ಸರ್ಕಾರಗಳು ಈ ಕುರಿಗಾಯಿಗಳನ್ನು ಗಮನಿಸಿ ಸತ್ತ ಕುರಿಗಳಿಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು ಮತ್ತು ಕುರಿಗಳಿಗೆ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಬೇಕು. ಕುರಿಗಾಹಿಗಳಿಗೂ ರಕ್ಷಣೆ ಒದಗಿಸಬೇಕು’ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.