ADVERTISEMENT

ಹೊಳೆಹೊನ್ನೂರು | ಕಳ್ಳತನ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 14:33 IST
Last Updated 22 ಡಿಸೆಂಬರ್ 2023, 14:33 IST
ಹೊಳೆಹೊನ್ನೂರಿನ ಪೊಲೀಸರು ಕಳ್ಳತನ ಆರೋಪಿಗಳನ್ನು ಬಂದಿಸಿರುವುದು
ಹೊಳೆಹೊನ್ನೂರಿನ ಪೊಲೀಸರು ಕಳ್ಳತನ ಆರೋಪಿಗಳನ್ನು ಬಂದಿಸಿರುವುದು   

ಹೊಳೆಹೊನ್ನೂರು: ಸಮೀಪದ ಬಿ.ಬೀರನಹಳ್ಳಿಯ ಮನೆಯೊಂದಕ್ಕೆ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಬಂದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿಯ ದರ್ಶನ್ (22) ಹಾಗೂ ವಿಜಯ್ (23) ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಆರೋಪಿಗಳು ಡ.11ರಂದು ಬಿ.ಬೀರನಹಳ್ಳಿಯ ಮನೆಯೊಂದರಲ್ಲಿ ₹ 25,000 ನಗದು ಸೇರಿ ₹ 1.13 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದರು.

ADVERTISEMENT

ವೃತ್ತ ನಿರೀಕ್ಷಕ ಲಕ್ಷ್ಮೀಪತಿ ನೆತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ಲಿಂಗೇಗೌಡ, ಮಂಜುನಾಥ್, ವಿಶ್ವನಾಥ್, ಕುಮಾರ್ ಚಂದ್ರಶೇಖರ್, ಪ್ರಮೋದ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.