ADVERTISEMENT

ಸೊಸೈಟಿ ಸುವರ್ಣ ಮಹೋತ್ಸವ ಡಿ.25ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:45 IST
Last Updated 21 ಡಿಸೆಂಬರ್ 2025, 6:45 IST
ತುಂಬೆಕೊಡಿಗೆ ರತ್ನಾಕರ
ತುಂಬೆಕೊಡಿಗೆ ರತ್ನಾಕರ   

ತೀರ್ಥಹಳ್ಳಿ: ಹಾರೋಗೊಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 50 ವರ್ಷ ತುಂಬಿದೆ. ಸುವರ್ಣ ಮಹೋತ್ಸವದ ಅಂಗವಾಗಿ ಸಂಘದ ನೂತನ ಕಟ್ಟಡ ಶಂಕುಸ್ಥಾಪನೆ, ಸಾರ್ಥಕ ಸಹಕಾರ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಡಿಸೆಂಬರ್‌ 25ರ ಗುರುವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ತುಂಬೆಕೊಡಿಗೆ ರತ್ನಾಕರ ಹೇಳಿದರು.

ಸೇವಾ ಕ್ಷೇತ್ರದ ವ್ಯಾಪ್ತಿ ಚಿಕ್ಕದಾಗಿದ್ದರು ಪ್ರಗತಿಯಲ್ಲಿ ಹಿಂದೆ ಉಳಿದಿಲ್ಲ. 3 ಬಾರಿ ಜಿಲ್ಲೆಯಲ್ಲಿ ಅತ್ಯುತ್ತಮ ಸಹಕಾರ ಸಂಘವಾಗಿ ಪ್ರಶಸ್ತಿ ಪಡೆದಿದೆ. ಹಾರೋಗೊಳಿಗೆ ಕಡಿದಾಳು ಮಂಜಪ್ಪ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾರಂಭ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

1976ರಲ್ಲಿ ಕಡಿದಾಳು ರಾಮಣ್ಣಗೌಡ ಅಧ್ಯಕ್ಷತೆಯಲ್ಲಿ ಸಂಘ ಆರಂಭಗೊಂಡಿದೆ. ಈವರೆಗೂ 9 ಅಧ್ಯಕ್ಷರು ಕಾರ್ಯ ನಿರ್ವಹಿಸಿದ್ದಾರೆ. ಹಾಲಿ ಸಂಘದಲ್ಲಿ ‘ಎ’ ವರ್ಗದ 665, ‘ಸಿ’ ವರ್ಗದ 535 ಜನ ಸದಸ್ಯರು ಇದ್ದಾರೆ. ಸಂಘವು 2024–25ನೇ ಸಾಲಿನಲ್ಲಿ ₹ 13 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸಿದ್ದು, ₹ 18 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದೆ. ಒಟ್ಟಾರೆ ₹ 10 ಕೋಟಿಗೂ ಹೆಚ್ಚಿನ ಸಾಲ ವಿತರಿಸಿದೆ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು ಆರಗ ಜ್ಞಾನೇಂದ್ರ ಬಿಡುಗಡೆ ಮಾಡಲಿದ್ದಾರೆ. ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಕಡಿದಳು ದಿವಾಕರ, ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಬಸವಾನಿ ವಿಜಯದೇವ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ್ ಶೆಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಭಾಗವಹಿಸಲಿದ್ದಾರೆ ಎಂದರು.

ಸಂಘದ ನಿರ್ದೇಶಕ ಕಡಿದಾಳು ತಾರಾನಾಥ್‌, ತೋರಳಿ ಪ್ರಸನ್ನ ಕುಮಾರ್‌, ಸಾರ್ಥಕ ಸ್ಮರಣ ಸಂಚಿಕೆ ಸಂಪಾದಕ ನೆಂಪೆ ದೇವರಾಜ್‌ ಮಾತನಾಡಿದರು. ನಿರ್ದೇಶಕರಾದ ಡಿ.ಟಿ.ಪ್ರಹ್ಲಾದ್‌, ರಮೇಶ್‌, ಅರ್ಚನಾ, ಕಲ್ಪನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.