
ತೀರ್ಥಹಳ್ಳಿ: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (MIO) ತೀರ್ಥಹಳ್ಳಿ ಕೇಂದ್ರದಲ್ಲಿ 81 ವರ್ಷದ ವೃದ್ಧೆಯೊಬ್ಬರ ಅಂಡಾಶಯದಲ್ಲಿದ್ದ 40 ಸೆಂ.ಮೀ ಗಾತ್ರದ ಸುಮಾರು 6 ಕೆ.ಜಿ ತೂಕದ ಭಾರಿ ಅಂಡಾಶಯ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.
ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಈ ವೃದ್ಧೆ ಹೆಚ್ಚಿನ ಅಪಾಯದ ರೋಗಿಯಾಗಿದ್ದರೂ, ಸಮಗ್ರ ವೈದ್ಯಕೀಯ ತಯಾರಿ ಮತ್ತು ತಜ್ಞರ ತಂಡದ ಸಮನ್ವಯದಿಂದ ಸಂಕೀರ್ಣ ಸ್ಟೇಜಿಂಗ್ ಲ್ಯಾಪರೋಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಮುಖ್ಯ ಶಸ್ತ್ರಚಿಕಿತ್ಸಕ ಡಾ.ಸುರೇಶ್ ಕ್ಲೆಮೆಂಟ್ ಡಿಸೋಜಾ ಅವರ ನೇತೃತ್ವದಲ್ಲಿ ಡಾ.ದಿವ್ಯಜ್ಯೋತಿ ಅವರೊಂದಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲಾಗಿದ್ದು, ರೋಗಿಯ ಕುಟುಂಬಕ್ಕೆ ಯಾವುದೇ ಆರ್ಥಿಕ ಭಾರವಾಗಿಲ್ಲ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ದೊಡ್ಡ ಶಸ್ತ್ರಚಿಕಿತ್ಸೆ ತೀರ್ಥಹಳ್ಳಿಯಂತಹ ಪಟ್ಟಣಗಳಲ್ಲಿಯೂ ಉನ್ನತ ಮಟ್ಟದ ಪ್ರೋಟೋಕಾಲ್ ಆಧಾರಿತ ಕ್ಯಾನ್ಸರ್ ಚಿಕಿತ್ಸೆ ನೀಡಲು ಸಾಧ್ಯವೆಂಬುದನ್ನು ಸಾಬೀತುಪಡಿಸಿದೆ. ದೊಡ್ಡನಗರ ಮಟ್ಟದ ಚಿಕಿತ್ಸೆ ಈಗ ಪಟ್ಟಣ ಭಾಗಕ್ಕೂ ತಲುಪುತ್ತಿದೆಡಾ. ಸುರೇಶ್ ರಾವ್ ತೀರ್ಥಹಳ್ಳಿಯ ಆಂಕಾಲಜಿ ತಂಡದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.