ADVERTISEMENT

ಬೆಂಗಳೂರಿನಿಂದ ಹಿಂದಿರುಗಿದ್ದ ಕೆಎಸ್‌ಆರ್‌ಪಿ‌ ಪೇದೆಯಿಂದ ಮೂವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 14:46 IST
Last Updated 12 ಜೂನ್ 2020, 14:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಬೆಂಗಳೂರಿನಿಂದ ಹಿಂದಿರುಗಿದ್ದ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಪಿ–2830) ಕಾನ್‌ಸ್ಟೆಬಲ್‌ ಒಬ್ಬರಿಂದ ಮೂವರು ಪೊಲೀಸರಿಗೆ ಸೋಂಕು ತಗುಲಿದೆ. 25 ವರ್ಷ (ಪಿ–6410), 21 ವರ್ಷ (ಪಿ–6412) ಹಾಗೂ 21 ವರ್ಷದ (ಪಿ–6413) ಮೂವರಿಗೆ ವೈರಸ್‌ ಇರುವುದು ದೃಢಪಟ್ಟಿದೆ.

ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ಕೇಂದ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 24 ವರ್ಷದ ವೈದ್ಯ ವಿದ್ಯಾರ್ಥಿನಿಯೊಬ್ಬರಿಗೂ (ಪಿ–6411) ವೈರಸ್‌ ತಗುಲಿದೆ. ಮಹಾರಾಷ್ಟ್ರದಿಂದ ಬಂದ 34 ವರ್ಷದ ಪುರುಷ (ಪಿ–6414), 38 ವರ್ಷದ ಮತ್ತೊಬ್ಬ ಪುರುಷ (ಪಿ–6415) ಸೇರಿ ಶುಕ್ರವಾರ ಜಿಲ್ಲೆಯಲ್ಲಿ 6 ಪ್ರಕರಣ ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 89ಕ್ಕೇರಿದೆ.

ಚಿಕಿತ್ಸೆ ಪಡೆದು ಗುಣಮುಖರಾದ 12 ಜನರನ್ನು ಶುಕ್ರವಾರ ಮನೆಗೆ ಕಳುಹಿಸಲಾಯಿತು. ಇದುವರೆಗೂ 43 ಜನರು ಗುಣಮುಖರಾಗಿದ್ದು, 46 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಂಬತ್ತು ಭಾಗಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.