ADVERTISEMENT

ತುಂಗಾ–ಭದ್ರಾ ನದಿಗಳ ಶುದ್ಧತೆ; ಜಾಗೃತಿಗೆ ಮನವಿ

-

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:24 IST
Last Updated 31 ಜುಲೈ 2024, 15:24 IST
ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳನ್ನು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ನೇತೃತ್ವದಲ್ಲಿ ಶಿವಮೊಗ್ಗದ ನಿರ್ಮಲಾ ತುಂಗಾ-ಭದ್ರಾ ಅಭಿಯಾನದ ತಂಡ ಬುಧವಾರ ಭೇಟಿ ಮಾಡಿತು
ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳನ್ನು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ನೇತೃತ್ವದಲ್ಲಿ ಶಿವಮೊಗ್ಗದ ನಿರ್ಮಲಾ ತುಂಗಾ-ಭದ್ರಾ ಅಭಿಯಾನದ ತಂಡ ಬುಧವಾರ ಭೇಟಿ ಮಾಡಿತು    

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆವರೆಗೂ ತುಂಗಾಭದ್ರಾ ನದಿಗಳ ಶುದ್ಧತೆ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳನ್ನು ಬುಧವಾರ ಶಿವಮೊಗ್ಗದ ನಿರ್ಮಲಾ ತುಂಗಾ-ಭದ್ರಾ ಅಭಿಯಾನದ ತಂಡ ಭೇಟಿ ಮಾಡಿತು.

ಇತ್ತೀಚಿನ ದಿನಗಳಲ್ಲಿ ತುಂಗಾ-ಭದ್ರಾ ನದಿಗಳು ಅತ್ಯಂತ ಕಲುಷಿತವಾಗುತ್ತಿವೆ. ಕುಡಿಯಲು ಯೋಗ್ಯವಲ್ಲದ ದುಸ್ಥಿತಿಗೆ ತಲುಪಿವೆ. ಆದ್ದರಿಂದ ನದಿಯನ್ನು ಪಾವಿತ್ರ್ಯತೆ ಕಾಪಾಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಿಸರ ತಂಡಗಳು ಹಾಗೂ ನಿರ್ಮಲ ತುಂಗಾ-ಭದ್ರಾ ಅಭಿಯಾನವು ಹಮ್ಮಿಕೊಂಡ ಜಾಗೃತಿ ಕುರಿತು ಶ್ರೀಗಳಿಗೆ ವಿಷಯ ತಿಳಿಸಲಾಯಿತು. 

ಈ ವೇಳೆ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹಾಗೂ ನಿರ್ಮಲ ತುಂಗ ಭದ್ರಾ ಅಭಿಯಾನ ತಂಡದ ಪ್ರಮುಖರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ, ಪ್ರೊ. ಎಲ್. ಕೆ. ಶ್ರೀಪತಿ, ಬಾಲಕೃಷ್ಣ ನಾಯ್ಡು, ಮಾಜಿ ನಗರಸಭಾ ಸದಸ್ಯರಾದ ಶಂಕರ್, ಹಾಲೇಶಪ್ಪ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.