ADVERTISEMENT

ನಿರುದ್ಯೋಗ ಸಮಸ್ಯೆ ಕುರಿತು ಭಾಷಣ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 12:41 IST
Last Updated 22 ಫೆಬ್ರುವರಿ 2020, 12:41 IST

ಶಿವಮೊಗ್ಗ: ಭಾರತೀಯ ಯುವ ಕಾಂಗ್ರೆಸ್ ನಿರುದ್ಯೋಗ ಸಮಸ್ಯೆ ಕುರಿತು ಮಾರ್ಚ್‌ 23ರಂದು ದೆಹಲಿಯಲ್ಲಿರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಿದೆ.

ವರ್ತಮಾನದ ತಲ್ಲಣವೇ ನಿರುದ್ಯೋಗ ಸಮಸ್ಯೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆನಿರುದ್ಯೋಗ ಸಮಸ್ಯೆಉಲ್ಬಣಗೊಂಡಿದೆ. ಯುವಕರು ನಿರಾಶರಾಗಿದ್ದಾರೆ. ಮೋದಿಸರ್ಕಾರ ಜನರ ಮೇಲೆಮಂಕುಬೂದಿ ಎರಚಿದೆ. ಜನರ ಉದ್ಯೋಗ ಕಸಿದುಕೊಂಡಿದೆ.ಹಾಗಾಗಿ, ‘ಯುವ ಭಾರತೀಯ ಕೂಗು’ ಎಂಬ ಘೋಷಣೆಅಡಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಆಯೋಜಿಸಲಾಗಿದೆಎಂದುಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಚ್.ಬಿ.ಗಿರೀಶ್ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರಿ ಉದ್ಯಮಗಳು ಬಾಗಿಲುಮುಚ್ಚುತ್ತಿವೆ.ಎಲ್‌ಐಸಿ,ಬಿಎಸ್‌ಎನ್‌ಎಲ್,ಏರ್ ಇಂಡಿಯಾಸೇರಿ 34ಕ್ಕೂ ಹೆಚ್ಚು ಸರ್ಕಾರಿ ಸ್ವಾಮ್ಯದ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ.ಇಂತಹ ಸನ್ನಿವೇಶದವಿರುದ್ಧ ಯುವ ಭಾರತೀಯರ ಕೂಗು ಅನಿವಾರ್ಯವಾಗಿದೆ ಎಂದರು.

18ರಿಂದ 35 ವಯೋಮಾನದ ಯುವಕರು ಭಾಗವಹಿಸಬಹುದು. ಜಿಲ್ಲೆಯಿಂದ ಒಬ್ಬರನ್ನು ರಾಜ್ಯಕ್ಕೆ, ರಾಜ್ಯದಿಂದ ಐವರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಯುವಕರು ತಮ್ಮ ಹೆಸರು ಆನ್‌ಲೈನ್ ಮೂಲಕ ಅಥವಾ ಮಿಸ್ಡ್‌ ಕಾಲ್‌ (81519 94411) ಕೊಡುವ ಮೂಲಕ ನೋಂದಣಿ ಮಾಡಬಹುದು. ನೋಂದಣಿಗೆಫೆ.29 ಕೊನೆಯ ದಿನ.

ಪತ್ರಿಕಾಗೋಷ್ಠಿಯಲ್ಲಿಯುವ ಕಾಂಗ್ರೆಸ್ ಜಿಲ್ಲಾಘಟಕದ ಅಧ್ಯಕ್ಷ ಎಂ.ಪ್ರವೀಣ್, ರಾಜ್ಯ ಕಾರ್ಯದರ್ಶಿಕಿರಣ್, ಪ್ರಮುಖರಾದ ನಿಖಿಲ್, ಟಿ.ವಿ.ರಂಜಿತ್, ಪ್ರದೀಪ್, ಮಂಜು, ಮಾರುತಿ, ರಾಕೇಶ್, ಪ್ರಜ್ವಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.