ADVERTISEMENT

ಶಿವಮೊಗ್ಗ: ಸ್ಥಾನಮಾನಕ್ಕೆ ಉಪ್ಪಾರ ಸಮಾಜ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:45 IST
Last Updated 26 ಜೂನ್ 2020, 14:45 IST
ಶಿವಮೊಗ್ಗದಲ್ಲಿ ಶುಕ್ರವಾರ ಉಪ್ಪಾರ ಸಮಾಜದ ಮುಖಂಡರು ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಕೋರಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಉಪ್ಪಾರ ಸಮಾಜದ ಮುಖಂಡರು ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಕೋರಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉಪ್ಪಾರ ಸಮಾಜಕ್ಕೆ ಸ್ಥಾನ ನೀಡುವಂತೆ ಆಗ್ರಹಿಸಿ ಸಮಾಜದ ಮುಖಂಡರು ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಮೂವರು ದಶಕಗಳಿಂದ ಬಿಜೆಪಿ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ವಿಧಾನ ಪರಿಷತ್ ಸದಸ್ಯತ್ವಕ್ಕೆ ಪರಿಗಣಿಸಬೇಕು. ನಗರ ಪಾಲಿಕೆಗೆ, ಶಿವಮೊಗ್ಗ- ಭದ್ರಾವತಿ‌ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮ‌ನಿರ್ದೇಶನಮಾಡಬೇಕು ಎಂದು ಮನವಿ ಮಾಡಿದರು.

ಸಂಸದ ಬಿ.ವೈ.ರಾಘವೇಂದ್ರ,ಮುಖ್ಯಮಂತ್ರಿಯಡಿಯೂರಪ್ಪ, ಪಕ್ಷದ ಮುಖಂಡರ ಗಮನಕ್ಕೆ ತರಲಾಗುವುದುಎಂದು ಭರವಸೆ ನೀಡಿದರು.

ADVERTISEMENT

ಸಮಾಜದ ಜಿಲ್ಲಾ ಅಧ್ಯಕ್ಷ ಎಸ್‌.ಆರ್.ಸತ್ಯನಾರಾಯಣ್, ಉಪಾಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿಗಳಾದ ಯು.ಕೆ.ವೆಂಕಟೇಶ್, ರಮೇಶ್, ಬೊಮ್ಮನಕಟ್ಟೆ ಮಂಜುನಾಥ್, ಗಾಜನೂರು ಗಣೇಶ್, ಕಿರಣ್ ಕಂಕಾರಿ, ಸುಧಾಕರ್, ಮಾರಶೆಟ್ಟಿಹಳ್ಳಿ ನಾಗರಾಜ್‌ ಮನವಿ ಸಲ್ಲಿಸಿದರು.

ಈ ಸಮಯದಲ್ಲಿಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ರಾಜ್ಯ ಸಂಘದ ಅಧ್ಯಕ್ಷರಾಗಿ‌ ಆಯ್ಕೆಯಾದಉಪ್ಪಾರ ಸಮಾಜದ ಮುಖಂಡ ಎನ್.ಮಂಜುನಾಥ್ಅವರನ್ನುಸಂಸದ ರಾಘವೇಂದ್ರಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.