ADVERTISEMENT

ವಂದೇ ಮಾತರಂ ದೇಶ ಪ್ರೇಮದ ಜ್ವಾಲೆ: ಬಿವೈಆರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:04 IST
Last Updated 8 ನವೆಂಬರ್ 2025, 6:04 IST
ಶಿವಮೊಗ್ಗದ ಬಿಜೆಪಿ ಕಚೇರಿ ಎದುರು ವಂದೇ ಮಾತರಂ ಗೀತೆಯನ್ನು ಶುಕ್ರವಾರ ಸಾಮೂಹಿಕವಾಗಿ ಹಾಡಲಾಯಿತು
ಶಿವಮೊಗ್ಗದ ಬಿಜೆಪಿ ಕಚೇರಿ ಎದುರು ವಂದೇ ಮಾತರಂ ಗೀತೆಯನ್ನು ಶುಕ್ರವಾರ ಸಾಮೂಹಿಕವಾಗಿ ಹಾಡಲಾಯಿತು   

ಶಿವಮೊಗ್ಗ: ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರ ದೇಶ ಪ್ರೇಮದ ಜ್ವಾಲೆ ಹೊತ್ತಿಸಿದ ಭಾವನಾತ್ಮಕ ಗೀತೆಯೆಂದರೆ ಅದು ವಂದೇ ಮಾತರಂ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಕಚೇರಿಯ ಮುಂದೆ ನಡೆದ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಯಾವುದೇ ಧಾರ್ಮಿಕ ಅರ್ಥವಿಲ್ಲದೆ ‘ತಾಯಿ’ಯಂತೆ ಮಾತೃಭೂಮಿ ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದರು.

‘ಒಬ್ಬ ತಾಯಿ ನಮ್ಮನ್ನು ಪೋಷಿಸುವಂತೆಯೇ, ನಮ್ಮ ಮಾತೃಭೂಮಿಯನ್ನು ಪೋಷಿಸಬೇಕು. ಆ ನಿಟ್ಟಿನಲ್ಲಿ ಈ ಹಾಡು ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದೆ ಎಂದು ತಿಳಿಸಿದರು.

ADVERTISEMENT

ಈ ಗೀತೆ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿದೆ. ನರೇಂದ್ರ ಮೋದಿ ಪ್ರಧಾನಿ ಇರುವಾಗ 150 ವರ್ಷ ಪೂರೈಸುತ್ತಿರುವುದು, ಸಂತಸದೊಂದಿಗೆ, ಸಂಭ್ರಮ ಮನೆ ಮಾಡಿದೆ. ಈ ಸಂತೋಷವನ್ನು ವರ್ಷ ಪೂರ್ತಿ ಆಚರಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಕೆ.ಜಗದೀಶ್ ಮಾತನಾಡಿ, ಈ ಸಂಭ್ರಮಾಚರಣೆಯ ಅಮೂಲ್ಯ ಕ್ಷಣಗಳನ್ನು ಮೋದಿ ನಮಗೆ ಕೊಟ್ಟಿರುವುದೇ ಸಂತಸ ತಂದಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪಕ್ಷದ ಮುಖಂಡ ಎಸ್.ಎನ್. ಜ್ಯೋತಿ ಪ್ರಕಾಶ್ ಹಾಗೂ ಪಕ್ಷದ ಮುಖಂಡರು ಇದ್ದರು.

ಹಿಂದೂಸ್ಥಾನದಲ್ಲಿ ಜನಿಸಿದ ಪ್ರತಿಯೊಬ್ಬರು 'ವಂದೇ ಮಾತರಂ' ಗೀತೆಯನ್ನು ಹೇಳಬೇಕು ಇದು ರಾಷ್ಟ್ರಗೀತೆಯಾಗಬೇಕಿತ್ತು. ಕೆಲವರ ತಪ್ಪು ಕಲ್ಪನೆಯಿಂದ ದೇಶ ಪ್ರೇಮಿಗಳ ಗೀತೆಯಾಗಿದೆ.                                                   
ಚನ್ನಬಸಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.