ADVERTISEMENT

ತೀರ್ಥಹಳ್ಳಿ: ಕೆಳಗಿನ ಅಣ್ಣುವಳ್ಳಿ ಗ್ರಾಮಸ್ಥರಿಂದ ಮತ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 6:42 IST
Last Updated 22 ಫೆಬ್ರುವರಿ 2023, 6:42 IST
ತೀರ್ಥಹಳ್ಳಿ ತಾಲ್ಲೂಕಿನ ಅಣ್ಣುವಳ್ಳಿ ಗ್ರಾಮಸ್ತರು ಪ್ರಕಟಿಸಿರುವ ಫೊಸ್ಟರ್.
ತೀರ್ಥಹಳ್ಳಿ ತಾಲ್ಲೂಕಿನ ಅಣ್ಣುವಳ್ಳಿ ಗ್ರಾಮಸ್ತರು ಪ್ರಕಟಿಸಿರುವ ಫೊಸ್ಟರ್.   

ತೀರ್ಥಹಳ್ಳಿ: ಮೇಗರವಳ್ಳಿ ಗ್ರಾಮ ಪಂಚಾಯಿತಿಯ ಕೆಳಗಿನ ಅಣ್ಣುವಳ್ಳಿ ಗ್ರಾಮಸ್ಥರು 2023ರ ವಿಧಾನಸಭಾ ಚುನಾವಣೆಯಲ್ಲಿ ಮತ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಮನೆಗಳ 200ಕ್ಕೂ ಹೆಚ್ಚು ಮತದಾರರು ಬೇಡಿಕೆ ಈಡೇರುವವರೆಗೆ ಮತದಾನ ಬಹಿಷ್ಕಾರ ಹಾಕಿದ್ದಾರೆ.

‘ಸುಮಾರು 20 ವರ್ಷಗಳ ಹಿಂದೆ ಕಳಪೆ ಕಾಮಗಾರಿಯಿಂದ 3 ತಿಂಗಳ ಅವಧಿಯಲ್ಲಿ ಕೊಚ್ಚಿ ಹೋದ ಕಾಲು ಸೇತುವೆಗೆ ಇಂದಿಗೂ ಪರ್ಯಾಯ ವ್ಯವಸ್ಥೆ ರೂಪಿಸಿಲ್ಲ. ಗೃಹ ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದರೂ ಗ್ರಾಮೀಣ ಪ್ರದೇಶಕ್ಕೆ ಮೀಸಲಿಟ್ಟಿಲ್ಲ. ಆಸ್ಪತ್ರೆ, ಶಾಲಾ ಸಂಪರ್ಕ ಕಷ್ಟವಾಗಿದ್ದರೂ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ. ನಾವು ಮತದಾನ ಮಾಡುವುದಿಲ್ಲ. ನೀವು ಮತ ಕೇಳಲು ಬರಬೇಡಿ. ಯಾವುದೇ ರಾಜಿ ಸಂಧಾನ, ಮನವೊಲಿಸುವ ಅವಕಾಶ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ 3ರಿಂದ 5 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಮೇಗರವಳ್ಳಿಗೆ ತಲುಪಬೇಕಿದೆ. ಶಾಲಾ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಅನಾರೋಗ್ಯ ಪೀಡಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ 10 ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ರಸ್ತೆಯನ್ನೂ ಸಹ ಇಲ್ಲಿಯವರೆಗೆ ದುರಸ್ತಿಪಡಿಸಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT