ADVERTISEMENT

ಶಿವಮೊಗ್ಗ: ಮಹಿಳೆಯರ ಸುರಕ್ಷತೆಗೆ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 10:48 IST
Last Updated 10 ಡಿಸೆಂಬರ್ 2019, 10:48 IST

ಶಿವಮೊಗ್ಗ: ತಡ ರಾತ್ರಿಯಲ್ಲಿ ಬರುವ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅವರಿಗೆ ಯಾವುದೇ ಸಂಶಯ ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಲುಜಿಲ್ಲಾ ಪೊಲೀಸ್ ಮನವಿ ಮಾಡಿದೆ.

ರಾತ್ರಿ 10ರಿಂದ ಬೆಳಿಗ್ಗೆ 6ರ ಮಧ್ಯದಲ್ಲಿ ದೂರದ ಸ್ಥಳಗಳಿಂದ ಪ್ರಯಾಣ ಮಾಡಿ ಬಂದ
ಮಹಿಳೆಯರು ನಿಗದಿತ ಸ್ಥಳಗಳಿಗೆ ತಲುಪಲು ಜಿಲ್ಲೆಯಾದ್ಯಂತ ಇರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರ ಸ್ಥಳಗಳಲ್ಲಿ ಕಾಯುತ್ತಿರುವ ಸಮಯದಲ್ಲಿ ಯಾವುದೇ ಸಂಶಯ ಕಂಡುಬಂದಲ್ಲಿ
ದೂ: 9480803300 ಮತ್ತು 112-ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ಸಹಾಯವನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT