ತೀರ್ಥಹಳ್ಳಿ: ಗಾಳಿ– ಮಳೆಯಿಂದಾಗಿ ಚಲಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಯಕ್ಷಗಾನ ಯುವ ಕಲಾವಿದ ಮೃತಪಟ್ಟ ದುರ್ಘಟನೆ ಬುಧವಾರ ರಾತ್ರಿ ಶೃಂಗೇರಿ– ಆಗುಂಬೆ ಮಾರ್ಗದ ಅಗಸರಕೋಣೆ ಬಳಿ ನಡೆದಿದೆ.
ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆ ಸಮೀಪದ ಕುದುರೆಮನೆಬೆಟ್ಟು ಗ್ರಾಮದ ಸೂರಾಲು ಯಕ್ಷಗಾನ ಮೇಳದ ಕಲಾವಿದ ರಂಜಿತ್ (20) ಮೃತ ವ್ಯಕ್ತಿ.
ಬೈಕ್‌ನಲ್ಲಿದ್ದ ಇನ್ನೊಬ್ಬ ಕಲಾವಿದ ವಿನೋದ್‌ರಾಜ್ ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೊಪ್ಪ ಸಮೀಪದ ಕವಡೇಕಟ್ಟೆಯಲ್ಲಿ ಬುಧವಾರ ನಡೆಯಬೇಕಿದ್ದ ಸೂರಾಲು ಯಕ್ಷಗಾನ ಮೇಳದ ಪ್ರದರ್ಶನ ಧಿಡೀರನೆ ಸುರಿದ ಮಳೆಯಿಂದಾಗಿ ರದ್ದಾದ ಕಾರಣ ಇಬ್ಬರೂ ಕಲಾವಿದರು ಬೈಕ್‌ನಲ್ಲಿ ತಮ್ಮ ಊರಿಗೆ ಹಿಂದಿರುಗುವ ವೇಳೆ ಅವಘಡ ಸಂಭವಿಸಿದೆ.
ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.