ತೀರ್ಥಹಳ್ಳಿ: ಸಮೀಪದ ಕಟ್ಟೇಹಕ್ಕಲು ಗ್ರಾಮದ ಬಳಿ ಬೇಟೆಗೆಂದು ತೆರಳಿದ್ದ ಯುವಕನೊಬ್ಬ ಕೈಲಿದ್ದ ಬಂದೂಕಿನಿಂದ ಗುಂಡು ಸಿಡಿದ ಪರಿಣಾಮ ಮಂಗಳವಾರ ತಡರಾತ್ರಿ ಮೃತಪಟ್ಟಿದ್ದಾನೆ.
ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಾರ ಮಜರೆ ಗ್ರಾಮದ ಗೌತಮ್ ಕೆ.ವಿ. (27) ಮೃತ ಯುವಕ.
ತಡರಾತ್ರಿ ನಾಲ್ವರು ಸ್ನೇಹಿತರೊಂದಿಗೆ ಗೌತಮ್ ಕಾರಿನಲ್ಲಿ ತೆರಳಿದ್ದ. ವಾಹನವನ್ನು ದಾರಿ ಮಧ್ಯೆ ನಿಲ್ಲಿಸಿ ಉಳಿದ ಸ್ನೇಹಿತರನ್ನು ಅಲ್ಲಿಯೇ ಬಿಟ್ಟು ಬಂದೂಕು ಹಿಡಿದುಕೊಂಡು ಸಮೀಪದ ಗುಡ್ಡ ಏರಿದ್ದ. ಬಂದೂಕಿನ ಟ್ರಿಗರ್ ಎಳೆದು ಗುಡ್ಡ ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದ ವೇಳೆ ಬಂದೂಕಿನಿಂದ ಗುಂಡು ಸಿಡಿದು ಕುತ್ತಿಗೆ ಮೂಲಕ ಮುಖವನ್ನು ಸೀಳಿಕೊಂಡು ಹೋಗಿ ಮೃತಪಟ್ಟಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.