ADVERTISEMENT

ಕೋವಿಡ್‌: ರಕ್ತದ ಆಕರ ಕೋಶ ದಾನ ಇಳಿಕೆ’- ಡಾ. ಗೋವಿಂದ ಎರಿಯೆಟ್

ಬಿಜಿಎಸ್ ಆಸ್ಪತ್ರೆಯಲ್ಲಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:45 IST
Last Updated 29 ಮೇ 2022, 19:45 IST
ರಕ್ತದ ಆಕರ ಕೋಶ ದಾನಕ್ಕೆ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡರು
ರಕ್ತದ ಆಕರ ಕೋಶ ದಾನಕ್ಕೆ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡರು   

ಬೆಂಗಳೂರು: ‘ಕೋವಿಡ್ ಕಾಣಿಸಿಕೊಂಡ ಬಳಿಕ ರಕ್ತದ ಆಕರ ಕೋಶ ದಾನಿಗಳ ಸಂಖ್ಯೆ ಇಳಿಕೆಯಾಗಿದೆ.ಇದರಿಂದಾಗಿ ಅಸ್ಥಿ ಮಜ್ಜೆ ಕಸಿಗೆ ಎದುರು
ನೋಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ’ ಎಂದುಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯಕೀಯ ಸಲಹೆಗಾರಡಾ. ಗೋವಿಂದ ಎರಿಯೆಟ್ ತಿಳಿಸಿದರು.

ಡಿಕೆಎಂಎಸ್ ಬಿಎಂಎಸ್‍ಟಿ ಫೌಂಡೇಷನ್ ಇಂಡಿಯಾ ಸಹಯೋಗದಲ್ಲಿ ಆಸ್ಪತ್ರೆ ನಗರದರಲ್ಲಿ ಹಮ್ಮಿಕೊಂಡರಕ್ತದ ಆಕರ ಕೋಶ ದಾನ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.‘ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ.ದೇಶದಲ್ಲಿ ಕ್ಯಾನ್ಸರ್ ‍ಪ್ರಕರಣಗಳು ಹೆಚ್ಚುತ್ತಿದ್ದು, ದಾನಿಗಳ ಕೊರತೆಯಿಂದಾಗಿ ಹಲವು ಮಂದಿ ಕಸಿಗೆ ಎದುರು ನೋಡುತ್ತಿದ್ದಾರೆ.ಆರಂಭಿಕ ಹಂತದಲ್ಲಿಯೆ ರೋಗಿಗೆ ಹೊಂದಾಣಿಕೆಯಾಗುವ ದಾನಿ ಸಿಕ್ಕಲ್ಲಿ ವ್ಯಕ್ತಿ ಬೇಗ ಚೇತರಿಸಿಕೊಳ್ಳುತ್ತಾನೆ’ ಎಂದು ಹೇಳಿದರು.

‘ರಕ್ತದ ಆಕರ ಕೋಶಗಳು ಆರು ವಾರಗಳಲ್ಲಿ ಮತ್ತೆ ಬೆಳೆಯುತ್ತವೆ.ರಕ್ತದಿಂದ ಆಕರ ಕೋಶಗಳನ್ನು ಪಡೆಯುವ ಪ್ರಕ್ರಿಯೆ 4ರಿಂದ 5 ಗಂಟೆಗಳಲ್ಲಿ ಮುಕ್ತಾಯವಾಗಲಿದೆ. ಕೇವಲ 200ರಿಂದ 250 ಎಂ.ಎಲ್ ರಕ್ತವನ್ನು ಮಾತ್ರ ಪಡೆಯಲಾಗುತ್ತದೆ. ದಾನಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ವಿವರಿಸಿದರು.

ADVERTISEMENT

ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್‍, ‘ಶೇ 30ರಷ್ಟು ರೋಗಿಗಳಿಗೆ ಮಾತ್ರ ಕುಟುಂಬದ ಸದಸ್ಯರು ಅಥವಾ ಸಂಬಂಧಿಗಳ ರಕ್ತದ ಆಕರ ಕೋಶ ಹೊಂದಾಣಿಕೆಯಾಗುತ್ತದೆ. ಶೇ 70ರಷ್ಟು ರೋಗಿಗಳಿಗೆ ರಕ್ತದ ಆಕರ ಕೋಶ ಹೊಂದಾಣಿಕೆಯಾಗುವ ದಾನಿಗಳನ್ನು ಹುಡುಕಬೇಕಾಗುತ್ತದೆ. ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು
ರಕ್ತದ ಆಕರ ಕೋಶ ಸಹಾಯಕ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.