ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಸಿಎಂ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 9:38 IST
Last Updated 4 ಮಾರ್ಚ್ 2014, 9:38 IST

ಮಧುಗಿರಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸರಕಾರ ಹಲವು ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಬಲಿಜ ಸಂಘ ಸೋಮವಾರ ಏರ್ಪಡಿ­ಸಿದ್ದ ಕಾರ್ಯಕ್ರಮದಲ್ಲಿ ಡಾ.ಎಂ.ಎಸ್.ರಾಮಯ್ಯ ಸ್ಮಾರಕ ಭವನ ಮತ್ತು ಗೌರಮ್ಮ ರಾಮಯ್ಯ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ಇದ್ದು, ಮಕ್ಕಳಿಗೆ ಸ್ಪರ್ಧೆ ಎದುರಿಸುವ ಶಕ್ತಿ ಕೊಟ್ಟಾಗ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.

ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತು­ವಾರಿ ಸಚಿವ ಟಿ.ಬಿ.ಜಯಚಂದ್ರ, ಗೋಕುಲ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ಶಾಸಕರಾದ ಎಂ.ಆರ್.ಸೀತಾರಾಮ್, ಕೆ.ಎನ್.­ರಾಜಣ್ಣ, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಮುಖಂಡರಾದ ರಾಮಚಂದ್ರಪ್ಪ, ಎಂ.ಎಸ್.ಶಂಕರ­ನಾರಾಯಣ, ಕೆ.ಪ್ರಕಾಶ್, ಬ್ಯಾಂಕ್ ಶಿವರಾಮಯ್ಯ, ರಂಗನಾಥಬಾಬು, ಆರ್.ಎಲ್.ಎಸ್.ರಮೇಶ್, ಮಂಜುನಾಥ್, ವೆಂಕಟೇಶ್, ಅನಂತನಾರಾಯಣ ಬಾಬು ಇತರರು ಉಪಸ್ಥಿತರಿದ್ದರು.

ಮನವಿ: ಒಳ ಮೀಸಲಾತಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ 2000 ಪರಿಶಿಷ್ಟ ಕುಟುಂಬಗಳಿಗೆ ನೇರ ಸಾಲ ಯೋಜನೆಯಡಿ ಸೌಲಭ್ಯ ಕಲ್ಪಿಸಬೇಕು. 2000 ನಿವೇಶನ, ಸಾಗುವಳಿ ಚೀಟಿ, ಶೇ 22.75 ಅನುದಾನವನ್ನು ಏಕ ಗವಾಕ್ಷಿ ಯೋಜನೆಯಡಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.