ADVERTISEMENT

ನೀರಾವರಿಗಾಗಿ ಹೋರಾಟ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 8:55 IST
Last Updated 10 ಫೆಬ್ರುವರಿ 2012, 8:55 IST

ಪಾವಗಡ: ಜನತೆ ಅನಿವಾರ್ಯತೆ ಸೃಷ್ಟಿಸದ ಹೊರತು ಯಾವುದೇ ನೀರಾವರಿ ಯೋಜನೆ ಜಾರಿ ಸಾಧ್ಯವಿಲ್ಲ ಎಂದು ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಿಗೆ ನಿರಂತರ ಹೋರಾಟ ಹಾಗೂ ನಿರ್ದಿಷ್ಟ ಯೋಜನಾ ಗುರಿ ಅಗತ್ಯ. ತಾಲ್ಲೂಕಿನ ಜನತೆ ಹೋರಾಟದ ಮನೋಭಾವ ಪ್ರದರ್ಶಿಸಬೇಕು ಎಂದರು.

ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕು. ನೀರಾವರಿಗಿಂತ ಅಲ್ಲಿನ ಜನರ ಬದುಕಿಗಾಗಿ ಕುಡಿಯುವ ನೀರು ಕೊಡಬೇಕು. ನೀರಿಗಾಗಿ ಹೋರಾಟಕ್ಕೆ  ಬೆಂಬಲವಿದೆ. ಅಗತ್ಯವಾದಲ್ಲಿ ಆಮರಣಾಂತ ಉಪವಾಸ ಕೂರಲು ಸಿದ್ಧ ಎಂದರು.

ಪ್ರತಿಕಾಗೋಷ್ಠಿಯಲ್ಲಿ ಡಾ.ವೆಂಕಟರಾಮಯ್ಯ, ಮಾನಂವೆಂಕಟಸ್ವಾಮಿ, ಒಕ್ಕಲಿಗರ ಸಂಘದ ಮರಡಿಪಾಳ್ಯದ ಈರಣ್ಣ, ಶೈಲಾಪುರ ಕರಿಯಣ್ಣ ಉಪಸ್ಥಿತರಿದ್ದರು. 

ಜೆಡಿಎಸ್ ಬೆಂಬಲ: ನೀರಿಗಾಗಿ ನಡೆಯುತ್ತಿರುವ ಪಾದಯಾತ್ರೆ ಮತ್ತು ಹೋರಾಟಕ್ಕೆ ಜೆಡಿಎಸ್ ಬೆಂಬಲವಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ತಿಳಿಸಿದ್ದಾರೆ.

ನೀರಿಗಾಗಿ ಯಾರೇ ಹೋರಾಟ ಮಾಡಲಿ ಬೆಂಬಲವಿರುತ್ತದೆ. ಈಗ  ಸಮಗ್ರ ನೀರು ಹೋರಾಟ ವೇದಿಕೆಗೆ ಸಹಕಾರವಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ತಿಮ್ಮೋರೆಡ್ಡಿ, ಎಸ್.ಕೆ. ರೆಡ್ಡಿ, ರಾಮಕೃಷ್ಣಾರೆಡ್ಡಿ ಅಕ್ಕಲಪ್ಪ ನಾಯ್ಡು, ಎಸ್.ಅರ್.ವೆಂಕಟರಾಮರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.