ADVERTISEMENT

ಪ್ರಶ್ನೆ ನೋಡಿ ಸುಸ್ತು ಬಡಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 6:20 IST
Last Updated 26 ಏಪ್ರಿಲ್ 2012, 6:20 IST

ತುಮಕೂರು: ಬಿಇಡಿ ಮೊದಲ ಸೆಮಿಸ್ಟರ್ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಅಭಾಸದಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಏ. 19ರಂದು ನಡೆದ ವಿಷಯಾಧರಿತ ಭಾಷಾ ಬೋಧನಾ ವಿಧಾನ ಸಂಸ್ಕೃತ ಪ್ರಶ್ನೆ ಪತ್ರಿಕೆಯಲ್ಲಿ 58 ಅಂಕಗಳಿಗೆ ಅಭ್ಯಾಸ ಸೂಚಿಯಿಂದ ಹೊರಗೆ ಪ್ರಶ್ನೆ ಕೇಳಲಾಗಿದೆ. ಪ್ರಶ್ನೆ ಪತ್ರಿಕೆ ಕಂಡು ವಿದಾರ್ಥಿಗಳು ಹೌಹಾರಿದ್ದಾರೆ.

ಪ್ರಶ್ನೆ ಪತ್ರಿಕೆ ಭಾಗ -ಎ ನಲ್ಲಿ ಬಹು ಅಂಶಗಳ ಆಯ್ಕೆ ಪ್ರಶ್ನೆಯನ್ನು ಬೋಧನಾ ವಿಧಾನದ ಆಧಾರದಲ್ಲಿ ಕೇಳದೇ ವಿಷಯಧಾರಿತವಾಗಿವೆ. ಭಾಗ-ಬಿ ಮತ್ತು ಭಾಗ-ಡಿ ನಲ್ಲೂ ಇದೇ ರೀತಿ ಅಭ್ಯಾಸ ಸೂಚಿಯಿಂದ ಹೊರಗೆ ಪ್ರಶ್ನೆ ಕೇಳಲಾಗಿದೆ. ಭಾಗ- ಇನಲ್ಲಿ ವಿಷಯಧಾರಿತ ಪ್ರಶ್ನೆ ಕೇಳುವಂತೆ ಇಲ್ಲದಿದ್ದರೂ ಕೇಳಲಾಗಿದೆ. ಎರಡನೇ ಸೆಮಿಸ್ಟರ್‌ಗೆ ಕೇಳುವ ಒಂದು ಪ್ರಶ್ನೆಯನ್ನು ಮೊದಲ ಸೆಮಿಸ್ಟರ್ ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ವಿ.ವಿ ತಪ್ಪಿಗೆ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ವಿ.ವಿ. ಸರಿಪಡಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಸಿಇಟಿ ಪರೀಕ್ಷೆಗೆ ತರಬೇತಿ

ತುಮಕೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಆಯ್ಕೆಗೆ ನಡೆಯುವ ಸಿಇಟಿ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಎಸ್.ಪಿ.ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಮೊ 8722409908 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.