ADVERTISEMENT

ಮದ್ಯದ್ದೇ ಮದ: ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:35 IST
Last Updated 4 ಡಿಸೆಂಬರ್ 2012, 6:35 IST

ಶಿರಾ: ಸದ್ಯದಲ್ಲೇ ಚುನಾವಣಾ ಕುರುಕ್ಷೇತ್ರ ಶುರುವಾಗಲಿದ್ದು, ಮತದಾರರನ್ನು ಮದ್ಯದ ಮೂಲಕ ಎಚ್ಚರಿಸಲು ಒಬ್ಬ ಅಭ್ಯರ್ಥಿ 500 ರೂಪಾಯಿ ಖರ್ಚು ಮಾಡಿದರೆ ಮತ್ತೊಬ್ಬ ಅಭ್ಯರ್ಥಿ ಮಲಗಿಸಲು ಸಾವಿರ ಖರ್ಚು ಮಾಡಲು ವ್ಯವಸ್ಥೆಯ ಹುನ್ನಾರ ನಡೆದಿದೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು.

ಶಿಬಿರಾಧಿಕಾರಿ ರಾಘವೇಂದ್ರ ಮಾತನಾಡಿದರು. ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಚಿದಾನಂದ ಗೌಡ, ಸಂಸ್ಥೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷೆ ಕವಿತಾ ಕಿರಣ್ ಕುಮಾರ್, ಶೋಭಾ ನಾಗರಾಜ್, ಎಚ್.ಎಸ್.ಮೂಡ್ಲಗಿರಿಯಪ್ಪ, ಎಸ್.ಕೆ.ರಾಮಚಂದ್ರ ಗುಪ್ತ, ಆರ್.ಲಕ್ಷ್ಮಣ್, ಪಿ.ಎಚ್.ಮಹೇಂದ್ರಪ್ಪ, ಬಿ.ಕೆ.ಮಂಜುನಾಥ್, ಜಗದೀಶ್, ಚಂದ್ರಶೇಖರ್, ನರಸಿಂಹಮೂರ್ತಿ, ಸೂರ್ಯನಾರಾಯಣ್, ಆರ್.ರಾಮು, ಡಾ.ರಾಮಕೃಷ್ಣ, ಡಾ.ಶಂಕರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.