ADVERTISEMENT

ಮಳೆಗೆ ಕೆಸರುಗದ್ದೆಯಾಗುವ ರಸ್ತೆ

ಸೈಕಲ್‌ನಲ್ಲಿ ಶಾಲೆಗೆ ಹೋಗಲು ಪರಡಾಡುವ ಸ್ಥಿತಿ ವಿದ್ಯಾರ್ಥಿನಿಯರುದು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 5:52 IST
Last Updated 3 ಆಗಸ್ಟ್ 2016, 5:52 IST
ಶಿರಾ ತಾಲ್ಲೂಕಿನ ನೇಜಯಂತಿ– ದ್ವಾರನಕುಂಟೆ ರಸ್ತೆ ಹದಗೆಟ್ಟಿದ್ದು, ಮಳೆಯಿಂದಾಗಿ ಕೆಸರುಗದ್ದೆಯಾಗಿರುವ ರಸ್ತೆಯಲ್ಲಿ ಶಾಲೆಗೆ ಸೈಕಲ್‌ನಲ್ಲಿ ಹೋಗಲು ಪರಡಾಡುತ್ತಿರುವ ವಿದ್ಯಾರ್ಥಿನಿಯರು
ಶಿರಾ ತಾಲ್ಲೂಕಿನ ನೇಜಯಂತಿ– ದ್ವಾರನಕುಂಟೆ ರಸ್ತೆ ಹದಗೆಟ್ಟಿದ್ದು, ಮಳೆಯಿಂದಾಗಿ ಕೆಸರುಗದ್ದೆಯಾಗಿರುವ ರಸ್ತೆಯಲ್ಲಿ ಶಾಲೆಗೆ ಸೈಕಲ್‌ನಲ್ಲಿ ಹೋಗಲು ಪರಡಾಡುತ್ತಿರುವ ವಿದ್ಯಾರ್ಥಿನಿಯರು   

ಶಿರಾ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆ ಹದಗೆಟ್ಟಿದೆ. ಮಳೆ ಬಂದರೆ ಸಂತೋಷ ಪಡಬೇಕು. ಆದರೆ ಇಲ್ಲಿ ಮಳೆ ಯಾಕಾದರೂ ಬರುತ್ತದೆ ಎಂದು ನಾಗರಿಕರು ಆಲಾಪಿಸುವಂತಾಗಿದೆ. ಕೆಸರು ಗದ್ದೆಯಾಗುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ.

ತಾಲ್ಲೂಕಿನ ನೇಜಯಂತಿ ಗ್ರಾಮದಿಂದ ದ್ವಾರನಕುಂಟೆಗೆ ಹೋಗುವ ರಸ್ತೆಯ ಸ್ಥಿತಿಯಂತೂ ಕೇಳುವರಿಲ್ಲದಂತಾಗಿದೆ. ಹುಲಿಕುಂಟೆ ಹೋಬಳಿ ಗಡಿ ಗ್ರಾಮವಾದ ನೇಜಯಂತಿ ಗ್ರಾಮದಲ್ಲಿ ಹಿಂದುಳಿದ ವರ್ಗದವರು, ದಲಿತರು ಸೇರಿದಂತೆ ರೈತ ಕುಟುಂಬಗಳು ಹೆಚ್ಚಾಗಿ ವಾಸವಾಗಿವೆ.

ಸುಮಾರು 800 ಜನಸಂಖ್ಯೆಯಿರುವ ಗ್ರಾಮದಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹಾಗೂ ಬಡ ರೋಗಿಗಳು ಚಿಕಿತ್ಸೆಗಾಗಿ ಈ ರಸ್ತೆಯ ಮೂಲಕವೇ ಸುಮಾರು 3 ಕಿ.ಮೀ ದೂರದಲ್ಲಿರುವ ದ್ವಾರನಕುಂಟೆ ಗ್ರಾಮಕ್ಕೆ ಹೋಗಬೇಕಿದ್ದು, ರಸ್ತೆ ಗುಂಡಿ ಬಿದ್ದಿರುವ ಕಾರಣ ದ್ವಿಚಕ್ರ ವಾಹನ, ಸೈಕಲ್‌ಗಳಲ್ಲಿ ಸಂಚರಿಸಲು ಪರದಾಡಬೇಕಿದೆ.

ಆಸ್ಪತ್ರೆಗೆ ಹೋಗುವ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ತೀವ್ರ ತೊಂದರೆಯಾಗಿದ್ದು ತಕ್ಷಣ ಈ ರಸ್ತೆಯನ್ನು ಅಭಿವೃದ್ದಿಪಡಿಸಿ ಡಾಂಬರು ಹಾಕುವಂತೆ ಗ್ರಾಮಸ್ಥರು ಮತ್ತು ವಿಧ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ನೇಜಯಂತಿ– ದ್ವಾರನಕುಂಟೆ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದ್ದು ರಸ್ತೆಯ ಅವ್ಯವಸ್ಥೆಯ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ದೂರನ್ನು ಯಾರೂ ಕೇಳುವರಿಲ್ಲ ಎನ್ನುವುದು ಗ್ರಾಮಸ್ಥರ ದೂರಾಗಿದೆ.­

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.