ADVERTISEMENT

ವರ್ಧಂತಿ ಉತ್ಸವ ನ.3ರಿಂದ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 9:13 IST
Last Updated 30 ಅಕ್ಟೋಬರ್ 2017, 9:13 IST

ಯಲ್ಲಾಪುರ: ಪುರಾತನ ಹಿನ್ನೆಲೆ ಹೊಂದಿರುವ ಪಟ್ಟಣದ ಕೋಟೆ ಕರಿಯವ್ವ ದೇವಸ್ಥಾನದ ಜೀರ್ಣೋದ್ಧಾರದ ನೆನಪಿನಲ್ಲಿ ಈ ಬಾರಿ ನವೆಂಬರ್ 3 ಮತ್ತು 4ರಂದು ವರ್ಧಂತಿ ಉತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಮಧುಸೂದನ ಬಾಳಗಿ ಹೇಳಿದರು.

ಭಾನುವಾರ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು. ನ.3ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ದೇವಿ ಮೂಲಮಂತ್ರ ಜಪ, ನಾಗಮೂಲಮಂತ್ರ ಜಪ, ಚಂಡಿ ಪಾರಾಯಣ, ಸಂಜೆ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ಯಾಗಶಾಲಾ ಪ್ರವೇಶ, ಕುಂಡಮಂಟಪ ಸಂಸ್ಕಾರ, ರಾಕ್ಷೋಘ್ನ ಹೋಮ, ಮಂಡಲ ದರ್ಶನ, ಕಲಶ ಸ್ಥಾಪನೆ, ನವಾಕ್ಷರಿ ಜಪ, ಮಂಗಳಾರತಿ, ಸಂಜೆ 6 ಕ್ಕೆ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ನ.4 ರಂದು ಬೆಳಿಗ್ಗೆ ದೇವತಾ ಪೂಜೆ, ಕಲಾವೃದ್ಧಿ ಹೋಮ, ನವಗ್ರಹ ಶಾಂತಿ ಹೋಮ, ಲಘುರುದ್ರ ಹವನ, ಶತಕಲಶಾಭಿಷೇಕ, ನಾಗಮೂಲ ಮಂತ್ರ ಹೋಮ, ನಾಗಕ್ಷೀರಾಭಿಷೇಕ, ರುದ್ರಾಭಿಷೇಕ, ನವಚಂಡಿ ಹೋಮ, ಪೂರ್ಣಾಹುತಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.

ಸಮಿತಿಯ ಖಜಾಂಚಿ ವಿನಾಯಕ ಪೈ ಮಾತನಾಡಿ, ಸಂಜೆ 6ಕ್ಕೆ ಮಂಜುನಾಥ ಭಟ್ಟ ಹಾಗೂ ಸಂಗಡಿಗರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗೋಮಾಂತಕ ಸಮಾಜದ ವತಿಯಿಂದ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 8 ಕ್ಕೆ ಕಾರ್ತಿಕ ದೀಪೋತ್ಸವ ನಡೆಯಲಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.