ADVERTISEMENT

ಸಂಸದರ ಹೇಳಿಕೆಗೆ ಖಂಡನೆ; ಸೋಲಿಸಲು ಕರೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 13:55 IST
Last Updated 5 ಫೆಬ್ರುವರಿ 2019, 13:55 IST
ಮುಂದಿನ ಚುನಾವಣೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಸೋಲಿಸುವಂತೆ ದಲಿತ ಸಂಘಟನೆಗಳ ಮುಖಂಡರು ನಗರದ ಅಂಬೇಡ್ಕರ್‌ ಭವನದಲ್ಲಿ ಮುಂದೆ ಮನವಿ ಮಾಡಿದರು
ಮುಂದಿನ ಚುನಾವಣೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಸೋಲಿಸುವಂತೆ ದಲಿತ ಸಂಘಟನೆಗಳ ಮುಖಂಡರು ನಗರದ ಅಂಬೇಡ್ಕರ್‌ ಭವನದಲ್ಲಿ ಮುಂದೆ ಮನವಿ ಮಾಡಿದರು   

ತುಮಕೂರು: ಒಂದು ಜಾತಿಯಿಂದ ಗೆಲುವು ಸಾಧಿಸಿದ್ದೇನೆ ಎಂದು ಹೇಳಿಕೆ ನೀಡಿರುವ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಸೋಲಿಸುವಂತೆ ದಲಿತ ಸಂಘಟನೆಗಳ ಒಕ್ಕೂಟವು ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಸಮುದಾಯ ಸಭೆಯಲ್ಲಿ ಕರೆ ನೀಡಿದೆ.

‘ಛಲವಾದಿ ಸಮುದಾಯದಿಂದ ನಾನು ಗೆಲುವು ಸಾಧಿಸಿದ್ದೇನೆ ಎಂದು ಸಂಸದ ಸಮುದಾಯದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದು, ಕಳೆದ ಚುನಾವಣೆ ಸಂದರ್ಭದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯಗಳು ಹಾಗೂ ಮಾದಿಗ ಸಮುದಾಯ ಬೆಂಬಲ ನೀಡಿದ್ದು, ಮಾದಿಗ ಸಮುದಾಯವನ್ನು ಕಡೆಗಣಿಸಿರುವ ಸಂಸದರನ್ನು ಸೋಲಿಸಬೇಕು’ ಎಂದು ಒಕ್ಕೂಟವು ಹೇಳಿದೆ.

ರಾಜಕೀಯ ಅಸ್ತಿತ್ವವೇ ಇಲ್ಲದ ಮುದ್ದಹನುಮೇಗೌಡ ಅವರಿಗೆ ಮತ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಜನಪರ ಯೋಜನೆಗಳು ಕಾರಣವಷ್ಟೇ, ಅದನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ಅವರಿಗೆ ಮತ ನೀಡಿಲ್ಲ.2013ರಲ್ಲಿ ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ಮಧುಗಿರಿಯಲ್ಲಿ ಅಹಿಂದ ನಾಯಕರ ಸೋಲಿಗೆ ಸಂಸದ ಮುದ್ದಹನುಮೇಗೌಡ ನೇರ ಕಾರಣ. ಇಂತಹ ಜಾತಿವಾದಿ ಸಂಸದರನ್ನು ಸೋಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

ಮುಖಂಡ ಕಿರಣ್, ಕೇಬಲ್ ರಘುಕುಮಾರ್, ಕುಮಾರ್‌ ಮಾದರ್, ವೆಂಕಟೇಶ್, ಸೋರೆಕುಂಟೆ ಯೋಗೀಶ್, ರಾಮಾಂಜಿ, ರಂಜನ್, ರಾಮಯ್ಯ, ಸಿದ್ದೇಶ್, ಅಬ್ಬತ್ತನಹಳ್ಳಿ ಶ್ರೀನಿವಾಸ್, ನರಸಿಂಹಮೂರ್ತಿ, ಶ್ರೀನಿವಾಸ್ ಕಲ್ಕೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.