ಚಿಕ್ಕನಾಯಕನಹಳ್ಳಿ: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ₨ 1.75 ಸಾವಿರ ಕೋಟಿ ಅನುದಾನ ತರುವ ಮೂಲಕ ಸಮರ್ಥ ಸಂಸದ ಎಂಬುದನ್ನು ಸಾಬೀತು ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಕಿಡಿಕಾರಿದರು.
ತಾಲ್ಲೂಕಿನ ಗೋಡೇಕೆರೆ ಸುಕ್ಷೇತ್ರದಲ್ಲಿ ಸಿದ್ದರಾಮೇಶ್ವರ ದೇವರಿಗೆ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀರು, ರೈಲ್ವೆ, ರಸ್ತೆ ಹಾಗೂ ಗುಡಿಕೈಗಾರಿಕೆಗಳನ್ನು ಆದ್ಯತೆಯ ಕ್ಷೇತ್ರಗಳೆಂದು ಪರಿಗಣಿಸಿ, ಕ್ಷೇತ್ರದ ಅಭಿವೃದ್ಧಿಗೆ ಯತ್ನಿಸಿದ್ದೇನೆ ಎಂದು ತಿಳಿಸಿದರು.
ಮುಖಂಡರಾದ ಗುಬ್ಬಿಯ ಪರಮೇಶ್ವರಪ್ಪ, ತುರುವೇಕೆರೆ ಶಿವಣ್ಣ, ದೊಂಬರನಹಳ್ಳಿ ಬಸವರಾಜು, ಬುಳ್ಳೇನಹಳ್ಳಿ ಪ್ರಕಾಶ್, ವಕೀಲ ಷಣ್ಮುಖಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.