ಪ್ರಾತಿನಿಧಿಕ ಚಿತ್ರ
ತೋವಿನಕೆರೆ: ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿನ ‘108’ ಆಂಬುಲೆನ್ಸ್ ಸಕಾಲಕ್ಕೆ ಸ್ಥಳೀಯರಿಗೆ ಲಭ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘108’ ಆಂಬುಲೆನ್ಸ್ ದುರಸ್ತಿಗೆ ಹೋದರೆ ಇಲ್ಲಿನ ಆಂಬುಲೆನ್ಸ್‌ಅನ್ನು ಅಲ್ಲಿಗೆ ಕರೆಸಿಕೊಳ್ಳುವ ಪರಿಪಾಠ ಹೆಚ್ಚಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗುರುವಾರ ಸಂಜೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಇರಲಿಲ್ಲ. ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ ‘20 ದಿನದಿಂದ ಮಧುಗಿರಿ ಅಸ್ಪತ್ರೆಯ ವಾಹನ ದುರಸ್ತಿಗೆ ಹೋಗಿದ್ದು, ಇಲ್ಲಿನ ಆಂಬುಲೆನ್ಸ್ ಅಲ್ಲಿಗೆ ಹೋಗಿದೆ’ ಎನ್ನುವ ಮಾಹಿತಿ ಸಿಕ್ಕಿತು ಎಂದು ಸಾರ್ವಜನಿಕರು ಹೇಳಿದರು.
ತೋವಿನಕೆರೆ ಸುತ್ತಲಿನ 25 ಕಿ.ಮೀ ವ್ಯಾಪ್ತಿಯಲ್ಲಿ ದೊಡ್ಡ ಅಸ್ಪತ್ರೆಗಳಿಲ್ಲ, ತುರ್ತು ಸಂದರ್ಭಗಳಲ್ಲಿ ಖಾಸಾಗಿ ವಾಹನಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.