ತುಮಕೂರು: ಜಿಲ್ಲೆಯಲ್ಲಿ ಭಾನುವಾರ ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಹೊಸದಾಗಿ 267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪಾವಗಡ ತಾಲ್ಲೂಕು ರೆಡ್ಡಿ ಕಾಲೊನಿಯ 65 ವರ್ಷದ ಪುರುಷ ಹಾಗೂ ಕುಣಿಗಲ್ ತಾಲ್ಲೂಕು ಎಡೆಯೂರು ಕತ್ತಘಟ್ಟ ಗ್ರಾಮದ 55 ವರ್ಷದ ಪುರುಷ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಭಾನುವಾರ ದೃಢಪಟ್ಟ ಸೋಂಕಿತರಲ್ಲಿ ತುಮಕೂರು 63, ಗುಬ್ಬಿ 54, ತುರುವೇಕೆರೆ 34, ತಿಪಟೂರು 29, ಶಿರಾ 34, ಪಾವಗಡ 11, ಮಧುಗಿರಿ 13, ಕುಣಿಗಲ್ 19, ಕೊರಟಗೆರೆ 6 ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4 ಮಂದಿಗೆ ಸೋಂಕು ತಗುಲಿದೆ. ಭಾನುವಾರ 138 ಪುರುಷರು ಹಾಗೂ 129 ಮಂದಿ ಮಹಿಳೆಯರಿಗೆ ಸೋಂಕು ತಗುಲಿದ್ದು ಅದರಲ್ಲಿ 60 ವರ್ಷ ಮೇಲ್ಪಟ್ಟ 60 ಮಂದಿ ಇದ್ದಾರೆ.
174 ಮಂದಿ ಗುಣಮುಖ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 174 ಮಂದಿ ಗುಣಮುಖರಾಗಿದ್ದು ಅವರನ್ನು ಭಾನುವಾರ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಿಂದ ಮನೆಗೆ ಕಳುಹಿಸಲಾಯಿತು. ಜಿಲ್ಲೆಯಲ್ಲಿ ಇನ್ನೂ 1,533 ಸಕ್ರಿಯ ಪ್ರಕರಣಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.