ADVERTISEMENT

ಕುರುಬರೆಲ್ಲ ಕಾಂಗ್ರೆಸ್ ಬೆಂಬಲಿಸಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 6:22 IST
Last Updated 5 ಜನವರಿ 2018, 6:22 IST
ಡಾ.ಪರಮೇಶ್ವರ್‌
ಡಾ.ಪರಮೇಶ್ವರ್‌   

ಕೊರಟಗೆರೆ:‘ರಾಜ್ಯದಲ್ಲಿ ಶೇ 7 ರಿಂದ 8ರಷ್ಟು ಕುರುಬರ ಸಮುದಾಯವಿದ್ದು, ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.

ತಾಲ್ಲೂಕಿನ ಕೆರೆಯಾಗಲಹಳ್ಳಿಯಲ್ಲಿ ತಾಲ್ಲೂಕು ಕುರುಬರ ಸಂಘ ಏರ್ಪಡಿಸಿದ್ದ ಸಮಾಜದ ಮುಖಂಡರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

’ಕಾಂಗ್ರೆಸ್ ಪಕ್ಷವು ಕುರುಬ ಸಮುದಾತದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದೆ. ದಲಿತ ವರ್ಗದ ನನ್ನನ್ನು ಕೆಪಿಸಿಸಿ ಅದ್ಯಕ್ಷರನ್ನಾಗಿ ನೇಮಿಸಿದೆ. ಅದೇ ರೀತಿ ವಿವಿಧ ಸಮುದಾಯದ ನಾಯಕರಿಗೆ ಪಕ್ಷವು ಮಹತ್ವದ ಜವಾಬ್ದಾರಿ ನೀಡಿದೆ’ ಎಂದರು.

ADVERTISEMENT

‘ಕೊರಟಗೆರೆಯಲ್ಲಿ ಕುರುಬ ಸಮಾಜಕ್ಕೆ 2 ಎಕರೆ ಭೂಮಿ ನೀಡಲಾಗಿದೆ. ನನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 10 ಲಕ್ಷ ಹಾಗೂ ಸಂಸದರ ನಿಧಿಯಿಂದ  ₹ 5 ಲಕ್ಷ  ಅನುದಾನ ನೀಡಲಾಗಿದೆ’ ಎಂದು ಹೇಳಿದರು.

ಕುರುಬ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಮೈಲಾರಪ್ಪ, ಗೌರವಾಧ್ಯಕ್ಷ ಮಲ್ಲಣ್ಣ, ಕನಕ ಯುವ ಸೇನೆಯ ಮುಖಂಡ ರಂಗಧಾಮಯ್ಯ, ವೀರಣ್ಣ, ಕುರುಡಗಾನಹಳ್ಳಿ ರಂಗಣ್ಣ, ಚಿಕ್ಕಹನುಮಯ್ಯ, ಲಕ್ಷ್ಮಣ್, ರಂಗನಾಥ್, ಮೈಲಾರಯ್ಯ, ಉಮಾಶಂಕರ್, ನಂಜುಂಡಯ್ಯ ಹಾಗೂ ಪಕ್ಷದ ವಕ್ತಾರ ಅನಿಲ್‌ಕುಮಾರ್‌ ಪಾಟೀಲ್, ಬಲಬೀರ್‌ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.