ADVERTISEMENT

ಶೇ 7.5ರಷ್ಟು ಮೀಸಲಾತಿ ನೀಡದಿದ್ದರೆ ಹೋರಾಟ

ಪಾವಗಡ: ವಾಲ್ಮೀಕಿ ಆಶ್ರಮದ ಸಂಜಯ ಕುಮಾರ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 1:56 IST
Last Updated 19 ಸೆಪ್ಟೆಂಬರ್ 2020, 1:56 IST
ಪಾವಗಡದಲ್ಲಿ ಶುಕ್ರವಾರ ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಸಲ್ಲಿಸಲಾಯಿತು
ಪಾವಗಡದಲ್ಲಿ ಶುಕ್ರವಾರ ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಸಲ್ಲಿಸಲಾಯಿತು   

ಪಾವಗಡ: ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ನೀಡ ದಿದ್ದಲ್ಲಿ ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ವಾಲ್ಮೀಕಿ ಆಶ್ರಮದ ಸಂಜಯಕುಮಾರ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ನಾಯಕ ಸಮುದಾಯದವರು 75 ಲಕ್ಷ ಮಂದಿ ಇದ್ದಾರೆ. 1973ರಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇ 3.5 ಮೀಸಲಾತಿ ಕಲ್ಪಿಸಿದ್ದು, ಈವರೆಗೆ ಬದಲಿಸಿಲ್ಲ. ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ವಾಲ್ಮೀಕಿ ಸ್ವಾಮಿಜಿ ನೇತೃತ್ವದಲ್ಲಿ ರಾಜನಹಳ್ಳಿಯಿಂದ ಬೆಂಗಳೂರು ಫ್ರೀಡಂಪಾರ್ಕ್‌ವರೆಗೆ 380 ಕಿ.ಮೀ ಪಾದಯಾತ್ರೆ ಮಾಡಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆಗಿನ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಆದರೆ, ಈವರೆಗೆ ಸಮಿತಿ ನೀಡಿದ ವರದಿಯನ್ನು ಅನುಷ್ಠಾನ ಮಾಡದೆ ಸರ್ಕಾರ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೆಗಾರ, ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸದಿದ್ದರೆ 1857ರ ಹಲಗಲಿ ಬೇಡರ ದಂಗೆ ಮರುಕಳಿಸುತ್ತದೆ ಎಂದರು.

ಮುಖಂಡ ಚಿತ್ತಾಗಾನಹಳ್ಳಿ ಚಂದ್ರು, ನರಸಿಂಹ, ಓಂಕಾರನಾಯಕ, ಭಾಸ್ಕರನಾಯಕ, ಟೈಲರ್ ನಾರಾ ಯಣಪ್ಪ, ಕನ್ನಮೇಡಿ ಸುರೇಶ್, ಲಕ್ಷ್ಮಿ ನಾರಾಯಣ, ನಾಗ ರಾಜ್, ಬ್ಯಾಡನೂರು ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.