ADVERTISEMENT

ತುರುವೇಕೆರೆ: ವಾಹನ ಡಿಕ್ಕಿ, ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 5:58 IST
Last Updated 28 ಆಗಸ್ಟ್ 2020, 5:58 IST
ಕೀರ್ತಿ
ಕೀರ್ತಿ   

ತುರುವೇಕೆರೆ: ತಾಲ್ಲೂಕಿನ ನಂದಿಕಲ್ಕೆರೆ ಗೇಟ್ ಬಳಿ ಬೈಕ್‌ಗೆ ಕ್ಯಾಂಟರ್ ಗುದ್ದಿ ಕಾಲೇಜು ವಿದ್ಯಾರ್ಥಿ ಜಡೆಯಾ ಗ್ರಾಮದ ಕೀರ್ತಿ (21) ಗುರುವಾರ ಮೃತಪಟ್ಟಿದ್ದಾರೆ.

ಅವರು ಪಟ್ಟಣದ ಹೊರವಲಯದ ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ.ನಲ್ಲಿ ಓದುತ್ತಿದ್ದಾರೆ. ಪರೀಕ್ಷೆ ಪ್ರವೇಶ ಪತ್ರ ತೆಗೆದುಕೊಂಡು ಹೋಗಲು ಮಧ್ಯಾಹ್ನ ಜಡೆಯಾದಿಂದ ತುರುವೇಕೆರೆಗೆ ಬರುತ್ತಿರುವಾಗ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪಟ್ಟಣದ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT