ADVERTISEMENT

ಕುಣಿಗಲ್: ನಮ್ಮ ನಡೆ ಪ್ರಗತಿಪರ ಕೃಷಿ ಕಡೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 5:49 IST
Last Updated 22 ಜುಲೈ 2025, 5:49 IST
ಕುಣಿಗಲ್ ತಾಲ್ಲೂಕು ಮಾದಪ್ಪನಹಳ್ಳಿಯಲ್ಲಿ ನಮ್ಮ ನಡೆ ಪ್ರಗತಿಪರ ಕೃಷಿಯ ಕಡೆ ಕಾರ್ಯಕ್ರಮ ನಡೆಯಿತು
ಕುಣಿಗಲ್ ತಾಲ್ಲೂಕು ಮಾದಪ್ಪನಹಳ್ಳಿಯಲ್ಲಿ ನಮ್ಮ ನಡೆ ಪ್ರಗತಿಪರ ಕೃಷಿಯ ಕಡೆ ಕಾರ್ಯಕ್ರಮ ನಡೆಯಿತು   

ಕುಣಿಗಲ್: ತಾಲ್ಲೂಕಿನ ಮಾದಪ್ಪನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯ ಅಂತಿಮ ವರ್ಷದ ಬಿ.ಎಸ್ಸಿ( ಕೃಷಿ) ವಿದ್ಯಾರ್ಥಿಗಳು ಮೂರು ತಿಂಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಕ್ಷೇತ್ರಭೇಟಿ ಮತ್ತು ಸಾಮಾನ್ಯ ಸಭೆಯ ಮೂಲಕ ಚಾಲನೆ ನೀಡಲಾಯಿತು.

ವಿದ್ಯಾರ್ಥಿ ತಿಲಕ್ ಮತ್ತು ಸಿಂಧು ಮಾತನಾಡಿ, ರೈತರಿಂದ ಮಾಹಿತಿ ಸಂಗ್ರಹಿಸಿ ಅವರ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಚಟುವಟಿಕೆ ಕೈಗೊಳ್ಳಲಾಗುವುದು. ಪ್ರತಿದಿನ ಇಬ್ಬರು ವಿದ್ಯಾರ್ಥಿಗಳು ಕುಣಿಗಲ್ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುವುದು ಎಂದರು.

ರೈತರ ಜಮೀನಿನ ಮಣ್ಣಿನ ಪರೀಕ್ಷೆ, ಎರೆಹುಳು ಗೊಬ್ಬರ ತಯಾರಿಕೆ, ಪೋಷಕಾಂಶಗಳ ನಿರ್ವಹಣೆ, ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿ, ಮಳೆ ನೀರು ಸಂರಕ್ಷಣೆ, ಅಣಬೆ ಬೇಸಾಯ, ಜೇನು ಕೃಷಿ, ಸಮಗ್ರ ಕೀಟ ಹಾಗೂ ರೋಗ ನಿಯಂತ್ರಣ ಕ್ರಮ, ಬೀಜೋಪಚಾರ, ರಾಸುಗಳ ಆರೋಗ್ಯ ತಪಾಸಣೆ, ಮೌಲ್ಯವರ್ಧಿತ ಆಹಾರ, ಅಜೋಲ ಉತ್ಪಾದನೆ, ಮಾಹಿತಿ ಕೇಂದ್ರ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಗ್ರಾಮಸ್ಥರು ಸದುಪಯೋಗಪಡೆದುಕೊಳ್ಳಲು ಮನವಿ ಮಾಡಿದರು.

ADVERTISEMENT

ಡಾ.ಸಾಗರ್.ಎಸ್., ಹರೀಶ್ ಗಂಗವರದಯ್ಯ, ಕುಮಾರ್, ಗಿರೀಶ್, ನೇತ್ರಾವತಿ, ಉಷಾ, ವೈಭವ, ಸುಮತಿ, ಯಶವಂತ್, ಭವಾನಿ, ರವೀಂದ್ರ ರೆಡ್ಡಿ, ಸಾರಿಕ, ಶಶಿ ಶಂಕರ್, ರಘು, ರಾಕೇಶ್, ವಿದ್ಯಾ, ಉದಯ್, ಸಿದ್ದಾರ್ಥ, ಸ್ನೇಹ, ಶ್ರೀತು, ದತ್ತು ಕುಮಾರ್, ಸೌಮ್ಯ, ಶ್ರೇಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.