ADVERTISEMENT

ತುಮಕೂರು: ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:44 IST
Last Updated 29 ಡಿಸೆಂಬರ್ 2025, 7:44 IST
ತುಮಕೂರು ತಾಲ್ಲೂಕಿನ ಬಿದರೆಕಟ್ಟೆಯಲ್ಲಿ ಭಾನುವಾರ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರು ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ತುಮಕೂರು ತಾಲ್ಲೂಕಿನ ಬಿದರೆಕಟ್ಟೆಯಲ್ಲಿ ಭಾನುವಾರ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರು ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು   

ತುಮಕೂರು: ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ತಾಲ್ಲೂಕಿನ ಬಿದರೆಕಟ್ಟೆ ಮತ್ತು ಬಸವೇಗೌಡನಪಾಳ್ಯದಲ್ಲಿ ಭಾನುವಾರ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

‘ಸರ್ಕಾರ ಬಿದರೆಕಟ್ಟೆ, ಬಸವೇಗೌಡನಪಾಳ್ಯದ ಸರ್ಕಾರಿ ಶಾಲೆಗಳನ್ನು ಮಸ್ಕಲ್ ಗ್ರಾಮ ಪಂಚಾಯಿತಿ ಶಾಲೆಗೆ ವಿಲೀನಗೊಳಿಸಲು ಹೊರಟಿದೆ. ಬಡವರ ಮಕ್ಕಳು ಶಿಕ್ಷಣಕ್ಕೆ ಪೂರಕವಾದ ಅಗತ್ಯ ಸೌಲಭ್ಯ ಕಲ್ಪಿಸಬೇಕಿದ್ದ ಸರ್ಕಾರವೇ ಶಾಲೆ ಮುಚ್ಚುತ್ತಿದೆ. ಇದು ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರದ ಭಾಗವಾಗಿದೆ’ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು 2 ಕಿಲೊ ಮೀಟರ್‌ ದೂರದ ಶಾಲೆಗೆ ಕಳುಹಿಸಲು ಆಗುವುದಿಲ್ಲ. ಇದು ಹೆಣ್ಣು ಮಕ್ಕಳು ಒಳಗೊಂಡಂತೆ ಗ್ರಾಮೀಣರ ಶಿಕ್ಷಣಕ್ಕೆ ಕುತ್ತು ತರುತ್ತದೆ ಎಂದರು.

ADVERTISEMENT

ಎಐಡಿಎಸ್ಒ 72ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.