
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದೀಕೆರೆ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನದ ಬಳಿಯ ಅಂಗನವಾಡಿಯಲ್ಲಿ ಶುಕ್ರವಾರ 4 ವರ್ಷದ ಬಾಲಕನಿಗೆ ಸಹಾಯಕಿ ಸಣ್ಣ ವಿಚಾರಕ್ಕಾಗಿ ಕೋಲಿನಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಮಗುವಿನ ಕೈಮೇಲೆ ಬಿದ್ದಿರುವ ಪೆಟ್ಟಿನ ಗುರುತುಗಳನ್ನು ಕಂಡ ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಡಿಪಿಒ ಹೊನ್ನಪ್ಪ ಪ್ರತಿಕ್ರಿಯಿಸಿ, ಕಚೇರಿ ಸೂಪರ್‌ವೈಸರ್ ನಾಳೆ ಕಂದಿಕೆರೆಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಅಂಗನವಾಡಿ ಸಹಾಯಕಿಗೆ ಅನಾರೋಗ್ಯವಿದ್ದ ಕಾರಣ ಬೇರೆಯವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅನುಮತಿ ಇಲ್ಲದೆ ಸಹಾಯಕಿ ಪರವಾಗಿ ಇನ್ನೊಬ್ಬರನ್ನು ನೇಮಿಸಿಕೊಂಡಿದ್ದಕ್ಕಾಗಿ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಗುವಿನ ಆರೋಗ್ಯ ವೆಚ್ಚವನ್ನು ಕಾರ್ಯಕರ್ತೆಯೇ ಭರಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.