ADVERTISEMENT

ತುಮಕೂರು: ಅನುದಾನ ಬಿಡುಗಡೆಗೆ ಕಲಾವಿದರು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 3:12 IST
Last Updated 31 ಜನವರಿ 2024, 3:12 IST
ತುಮಕೂರು ತಾಲ್ಲೂಕಿನ ಗೂಳೇಹರವಿಯಲ್ಲಿ ಈಚೆಗೆ ಕಲಾವಿದರ ಒಕ್ಕೂಟದಿಂದ ಸಾಂಸ್ಕೃತಿಕ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೀರೇಶಪ್ರಸಾದ್‌, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಸಿದ್ದರಾಮಣ್ಣ, ಮುಖಂಡರಾದ ಎಸ್‌.ಪಿ.ಚಿದಾನಂದ್‌, ಡಾ.ಹಿರೇಮಠ, ಡಿ.ಕೆಂಪಣ್ಣ ಇತರರು ಉಪಸ್ಥಿತರಿದ್ದರು

ತುಮಕೂರು: ರಾಜ್ಯದಲ್ಲಿ 35 ಲಕ್ಷ ಜನಪದ ಹಾಗೂ ರಂಗಭೂಮಿ ಕಲಾವಿದರಿದ್ದು, ಅನುದಾನದ ಕೊರತೆಯಿಂದ ಅವರಿಗೆ ಅಗತ್ಯ ಸೌಲಭ್ಯ ಸಿಗುತ್ತಿಲ್ಲ. ಮುಂದಿನ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕನಿಷ್ಠ ₹1 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ರಾಜ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶಪ್ರಸಾದ್‌ ಒತ್ತಾಯಿಸಿದರು.

ತಾಲ್ಲೂಕಿನ ಗೂಳೇಹರವಿಯಲ್ಲಿ ಈಚೆಗೆ ಕಲಾವಿದರ ಒಕ್ಕೂಟದಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕಲಾವಿದರ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. 20 ಸಾವಿರ ಜನಪದ, ರಂಗಭೂಮಿ ಕಲಾವಿದರನ್ನು ಸೇರಿಸಲಾಗುವುದು’ ಎಂದು ಎಚ್ಚರಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಸಿದ್ದರಾಮಣ್ಣ, ಮುಖಂಡರಾದ ಎಸ್‌.ಪಿ.ಚಿದಾನಂದ್‌, ಡಾ.ಹಿರೇಮಠ, ಡಿ.ಕೆಂಪಣ್ಣ, ಗೋವಿಂದರಾಜು, ಜಿ.ಸಿ.ಬಸವರಾಜು ಇತರರು ಪಾಲ್ಗೊಂಡಿದ್ದರು.

ADVERTISEMENT

ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಿದ್ಧರಾಮಣ್ಣ ಗೂಳೇಹರವಿ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಸ್‌.ರಮೇಶ್‌ ಅವರನ್ನು ನೇಮಿಸಿ, ಆದೇಶ ಪತ್ರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.