ADVERTISEMENT

ಆಯುರ್ವೇದ ಔಷಧಿ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 4:34 IST
Last Updated 20 ಮೇ 2021, 4:34 IST
ತುಮಕೂರಿನ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ರೋಗ ನಿರೋಧಕ ಶಕ್ತಿ ವರ್ಧಿಸುವ ಆಯುರ್ವೇದ ಔಷಧಿ ಕಿಟ್ ವಿತರಿಸಲಾಯಿತು
ತುಮಕೂರಿನ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ರೋಗ ನಿರೋಧಕ ಶಕ್ತಿ ವರ್ಧಿಸುವ ಆಯುರ್ವೇದ ಔಷಧಿ ಕಿಟ್ ವಿತರಿಸಲಾಯಿತು   

ತುಮಕೂರು: ಕೋವಿಡ್–19 ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುವ ಆಯುರ್ವೇದ ಔಷಧಿಗಳ ‘ಆಯುಷ್ ಕಿಟ್‌’ಅನ್ನು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ‘ಗಿವ್ ಬ್ಯಾಕ್’ ಸಂಸ್ಥೆ ನೇತೃತ್ವದಲ್ಲಿ ವಿತರಿಸಿತು.

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ರೋಗಗಳು ಯುವಜನರನ್ನು ಹೆಚ್ಚಾಗಿ ಬಾಧಿಸುತ್ತಿವೆ. ದುಶ್ಚಟಗಳು, ಕಲುಷಿತ ಆಹಾರ ಸೇವನೆಯಿಂದ ರೋಗಗಳು ಹೆಚ್ಚುತ್ತಿವೆ. ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕೋವಿಡ್ ಸಂಯೋಜಕ ಹಾಗೂ ತುಮಕೂರು ರೋಟರಿ ಸಿಟಿ ಕಾರ್ಯದರ್ಶಿ ಬಿ.ಆರ್.ಉಮೇಶ್ ಅಭಿಪ್ರಾಯಪಟ್ಟರು.

ಜಿಲ್ಲಾ ಆಯುರ್ವೇದ ಪದವೀಧರರ ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ್ ಪಾಲ್ತೈ, ‘ಆಯುರ್ವೇದ ಔಷಧಿಗಳನ್ನು 10ರಿಂದ 15 ದಿನಗಳ ಕಾಲ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಆಯುಷ್ ಕಿಟ್‍ನಲ್ಲಿರುವ ಅಶ್ವಗಂಧ, ಶುಂಠಿ, ಭೂಮಿ ಅಮಲಕಿ, ತುಳಸಿ ಸಸ್ಯಗಳು ವೈರಾಣು ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿವೆ’ ಎಂದು ವಿವರಿಸಿದರು.

ADVERTISEMENT

ಗಿವ್ ಬ್ಯಾಕ್ ಸಂಸ್ಥೆಯ ರಕ್ಷಿತ್‍, ‘ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಆಯುರ್ವೇದ ಔಷಧಿ ಕಿಟ್‍ಗಳನ್ನು ಉಚಿತವಾಗಿ ನಮ್ಮ ಸಂಸ್ಥೆ ವತಿಯಿಂದ ನೀಡಲಾಗಿದೆ’ ಎಂದರು.

ಪ್ರಮುಖರಾದ ಕೆ.ಜಿ.ಶಿವಕುಮಾರ್, ಸಿ.ಆರ್.ನಟರಾಜು, ಪ್ಲಾಂಥಾಮಸ್ಸ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.