
ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಕಣಿವೆಯ ಅಯ್ಯಪ್ಪಗಿರಿಯಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಬೆಳಗಿನ ಜಾವದಿಂದಲೇ ಗಣಪತಿ, ಸುಬ್ರಹ್ಮಣ್ಯ, ಅಯ್ಯಪ್ಪಸ್ವಾಮಿ, ದೇವಿ ಮೂಲ ವಿಗ್ರಹಳಿಗೆ ಪಂಚಾಮೃತ, ತುಪ್ಪದ ಅಭಿಷೇಕ ನಡೆಯಿತು. ಅಷ್ಟೋತ್ತರ, ಕುಂಕುಮಾರ್ಚನೆ, ಸಂಕಲ್ಪ ಪೂಜೆಗಳಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
ದೇಗುಲ ಬಳಿಯ 18 ಮೆಟ್ಟಿಲುಗಳನ್ನು, ಇಡೀ ದೇಗುಲವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ದೇಗುಲಕ್ಕೆ ಅಳವಡಿಸಲಾಗಿದ್ದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು.
ಶಬರಿಮಲೆಯ ಬಳಿ ಜ್ಯೋತಿ ಕಂಡು ಬರುವ ಸಮಯಕ್ಕೆ ಸರಿಯಾಗಿ ದೇಗುಲದ 18 ಮೆಟ್ಟಿಲುಗಳ ಬಳಿ ಕರ್ಪೂರದ ಆರತಿ ಬೆಳಗಲಾಯಿತು.
15 ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ವಾಮಿ ಅಯ್ಯಪ್ಪ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಸ್ವಾಮಿ ಅಯ್ಯಪ್ಪ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವಮೂರ್ತಿ, ಉಪಾಧ್ಯಕ್ಷ ಹನುಮಂತರಾಯಪ್ಪ, ಖಜಾಂಚಿ ರಾಮಾಂಜಿನರೆಡ್ಡಿ, ಕಾರ್ಯದರ್ಶಿ ಎಚ್. ಚಂದ್ರಪ್ಪ, ಜಂಟಿ ಕಾರ್ಯದರ್ಶಿ ಕುಮಾರ್, ಪದಾಧಿಕಾರಿಗಳಾದ ಮಲ್ಲೇಶ್, ಸೇತುರಾಮ್, ನಾನಿಸ್ವಾಮಿ, ಸುಧಾಕರರೆಡ್ಡಿ, ಸುಬ್ಬಾರೆಡ್ಡಿ, ರಾಘವನ್, ಎಸ್. ಮಂಜುನಾಥ, ಗೋಪಾಲ್, ಮಧು, ಪ್ರವೀಣ್, ವೆಂಕಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.