ತಿಪಟೂರು: ನಗರದ ಕಲ್ಲೇಶ್ವರ ದೇಗುಲ ಆವರಣದಲ್ಲಿದ್ದ ಅಯ್ಯಪ್ಪ ಸ್ವಾಮಿ ಶೆಡ್ ಬೀಗ ತೆಗೆದು ಶುಕ್ರವಾರ ಮುಂಜಾನೆ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಸ್ಥಳಾಂತರಿಸಲಾಗಿದೆ.
ಅಯ್ಯಪ್ಪ ಸ್ವಾಮಿ ದೇವಾಸ್ಥಾನ ನಿರ್ಮಾಣಕ್ಕೆ ಹಾಗೂ ಒಂದು ಗುಂಟೆಯ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ ಗದ್ದಲಗಳು ಉಂಟಾದ ಕಾರಣ ಮುಜರಾಯಿ ಇಲಾಖೆಯಿಂದ ತಾಲ್ಲೂಕು ಆಡಳಿತದ ಮೂಲಕ ತಾತ್ಕಾಲಿಕ ಶೆಡ್‌ಗೆ ಕಳೆದ ತಿಂಗಳು ಬೀಗಮುದ್ರೆ ಮಾಡಲಾಗಿತ್ತು. ಕಳೆದೆರಡು ದಿನಗಳಲ್ಲಿ ಅಯ್ಯಪ್ಪ ಸ್ವಾಮಿ ವಿಗ್ರಹ ಕಳವಾಗಿದೆ ಎಂದು ಕಸಬಾ ಕಂದಾಯ ನಿರೀಕ್ಷಕ ರಂಗಪ್ಪ ಪೊಲೀಸರಿಗೆ ದೂರು ನೀಡಲು ಸಹ ಮುಂದಾಗಿದ್ದರು. ಆದರೆ ಶುಕ್ರವಾರ ಮುಂಜಾನೆ 3ರಿಂದ 4 ಗಂಟೆಯ ಸಮಯದಲ್ಲಿ ಕಸಬಾ ಹೋಬಳಿಯ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕ ರಂಗಪ್ಪ ಮತ್ತು ಪೊಲೀಸರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಶೆಡ್‌ನಿಂದ ಸ್ಥಳಾಂತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.