
ಪಾವಗಡ: ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ಸಮಿತಿಯು ಬಿ+ ಶ್ರೇಣಿ ನೀಡಿದೆ ಎಂದು ಪ್ರಾಂಶುಪಾಲ ಕೆ.ಒ. ಮಾರಪ್ಪ ತಿಳಿಸಿದ್ದಾರೆ.
2014-15ರಲ್ಲಿ ಆರಂಭವಾಗಿದ್ದ ಕಾಲೇಜಿಗೆ 5 ವರ್ಷಗಳ ಶೈಕ್ಷಣಿಕ, ಸವಲತ್ತುಗಳ ಗುಣಮಟ್ಟ ಪರಿಶೀಲಿಸಲು ಡಾ.ದಬಾಸಿಸ್ ಭಟ್ಟಾಚಾರ್ ಜಿ., ಡಾ.ರೇಖಾ ಪಾಂಡೆ, ಡಾ.ಮಂಜುಶ್ರೀ ಬೋಬಡೆ ಅವರನ್ನು ಒಳಗೊಂಡು ತಂಡ ಭೇಟಿ ನೀಡಿತ್ತು. ನೂತನವಾಗಿ ಕಾಲೇಜು ಆರಂಭವಾಗಿದ್ದರೂ ಗುಣಮಟ್ಟದ ಶಿಕ್ಷಣ ನೀಡುತ್ತಿರು ವುದು, ವಿದ್ಯಾರ್ಥಿ ಗಳ ಪಠ್ಯ, ಪಠ್ಯೇತರ ಚಟುವಟಿಕೆ ಬಗ್ಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಆದರೆ, ಕಾಲೇಜಿಗೆ ಆವರಣ ಗೋಡೆ ಇಲ್ಲದಿರುವುದು, ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಸೌಲಭ್ಯ ಇಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಕಾಲೇಜಿಗೆ ಬಿ+ ಶ್ರೇಣಿ ಸಿಕ್ಕಿರುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕಾಲೇಜಿಗೆ ರೂಸಾ ಅನುದಾನ ಸಿಗಲಿದೆ ಎಂದು ನ್ಯಾಕ್, ಐಕ್ಯುಎಸಿ ಸಂಚಾಲಕ ನಾಗರಾಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.