ADVERTISEMENT

ತುಮಕೂರಿನಲ್ಲಿ ಕಳುವಾಗಿದ್ದ ಬೈಕ್ ಕುಣಿಗಲ್‌ನಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 9:54 IST
Last Updated 20 ಮೇ 2020, 9:54 IST
ಕುಣಿಗಲ್ ಪೊಲೀಸರು ವಶಪಡಿಸಿಕೊಂಡ ಬೈಕ್‌
ಕುಣಿಗಲ್ ಪೊಲೀಸರು ವಶಪಡಿಸಿಕೊಂಡ ಬೈಕ್‌   

ಕುಣಿಗಲ್: ತುಮಕೂರಿನಲ್ಲಿ ಕಳುವಾಗಿದ್ದ ಬೈಕ್, ಕುಣಿಗಲ್‌ನಲ್ಲಿ ಪತ್ತೆಯಾಗಿದ್ದು, ಪೊಲೀಸರು ಮಾಲೀಕನನ್ನು ಪತ್ತೆ ಹಚ್ಚಿ ವಾಹನ ಮರಳಿಸಿದ್ದಾರೆ.

ಪಟ್ಟಣದ ರೈಲು ನಿಲ್ದಾಣದ ಮುಂಭಾಗ ಮೂರು ತಿಂಗಳಿಂದಲೂ ಹೊಂಡ ಬೈಕ್ ನಿಂತಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಾಹನ ವಶಕ್ಕೆ ಪಡೆದರು. ನಂತರ ವಾಹನದ ಸಂಖ್ಯೆ ಮೂಲಕ ಮಾಲೀಕನನ್ನು ಪತ್ತೆಹಚ್ಚಲಾಗಿದೆ.

ಸ್ವಾಂದೇನಹಳ್ಳಿಯ ಸೋಮಶೇಖರ್ ಅವರು ತುಮಕೂರು ಮಂಡಿಪೇಟೆ ಬಳಿ ಸೂರ್ಯ ಮೆಟಲ್ ಅಂಗಡಿ ಮುಂದೆ ನಿಲ್ಲಿಸಿದ್ದ
ಹೊಂಡ ಬೈಕ್‌ ಅನ್ನು ಫೆ. 1ರಂದು ಕಳವು ಮಾಡಲಾಗಿತ್ತು. ಈ ಬಗ್ಗೆ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಸೋಮವಾರ ಸಂಜೆ ಬೈಕ್ ಅನ್ನು ಮಾಲೀಕನ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.