ADVERTISEMENT

ನಾಟಕ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ: ತಿಪಟೂರು ಸತೀಶ್‌

ರಂಗಾಯಣ ನಿರ್ದೇಶಕ ತಿಪಟೂರು ಸತೀಶ್‌ ಹೇಳಿಕೆ, ‘ಬಾಬ್ ಮಾರ್ಲಿ ಫ್ರಮ್‌ ಕೋಡಿಹಳ್ಳಿ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 16:11 IST
Last Updated 31 ಆಗಸ್ಟ್ 2024, 16:11 IST
ತುಮಕೂರಿನಲ್ಲಿ ಶನಿವಾರ ನಿರ್ದಿಗಂತ, ಜಂಗಮ ಕಲೆಕ್ಟಿವ್‌ ವತಿಯಿಂದ ಏರ್ಪಡಿಸಿದ್ದ ‘ಬಾಬ್ ಮಾರ್ಲಿ ಫ್ರಮ್‌ ಕೋಡಿಹಳ್ಳಿ’ ನಾಟಕಕ್ಕೆ ರಂಗಾಯಣ ನಿರ್ದೇಶಕ ತಿಪಟೂರು ಸತೀಶ್‌ ಚಾಲನೆ ನೀಡಿದರು. ಸಾಹಿತಿ ಎಸ್‌.ನಟರಾಜ ಬೂದಾಳು, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಚಿಂತಕ ಕೆ.ದೊರೈರಾಜು, ಹರಿಕಥಾ ವಿದ್ವಾನ್‌ ಲಕ್ಷ್ಮಣ್‌ದಾಸ್‌ ಇತರರು ಹಾಜರಿದ್ದರು
ತುಮಕೂರಿನಲ್ಲಿ ಶನಿವಾರ ನಿರ್ದಿಗಂತ, ಜಂಗಮ ಕಲೆಕ್ಟಿವ್‌ ವತಿಯಿಂದ ಏರ್ಪಡಿಸಿದ್ದ ‘ಬಾಬ್ ಮಾರ್ಲಿ ಫ್ರಮ್‌ ಕೋಡಿಹಳ್ಳಿ’ ನಾಟಕಕ್ಕೆ ರಂಗಾಯಣ ನಿರ್ದೇಶಕ ತಿಪಟೂರು ಸತೀಶ್‌ ಚಾಲನೆ ನೀಡಿದರು. ಸಾಹಿತಿ ಎಸ್‌.ನಟರಾಜ ಬೂದಾಳು, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಚಿಂತಕ ಕೆ.ದೊರೈರಾಜು, ಹರಿಕಥಾ ವಿದ್ವಾನ್‌ ಲಕ್ಷ್ಮಣ್‌ದಾಸ್‌ ಇತರರು ಹಾಜರಿದ್ದರು   

ತುಮಕೂರು: ನಾಟಕ ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ಕಲೆ, ಸಂಘಟನೆ, ಜೀವನ ಪರಿಚಯಿಸುತ್ತದೆ. ಬದುಕಿನ ವಿವಿಧ ಆಯಾಮಗಳನ್ನು ಒಳಗೊಂಡಿದೆ ಎಂದು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್‌ ಹೇಳಿದರು.

ನಗರದಲ್ಲಿ ಶನಿವಾರ ನಿರ್ದಿಗಂತ, ಜಂಗಮ ಕಲೆಕ್ಟಿವ್‌ ವತಿಯಿಂದ ಏರ್ಪಡಿಸಿದ್ದ ‘ಬಾಬ್ ಮಾರ್ಲಿ ಫ್ರಮ್‌ ಕೋಡಿಹಳ್ಳಿ’ ನಾಟಕಕ್ಕೆ ಚಾಲನೆ ಮಾತನಾಡಿದರು.

ರಂಗಭೂಮಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಸಂವೇದನಾಶೀಲ ನಾಟಕಗಳು ಹೊರ ಬರುತ್ತಿವೆ. ಮತ್ತೆ ಮತ್ತೆ ನೋಡಿಸಿಕೊಳ್ಳುತ್ತಿವೆ. ಹಲವು ಪ್ರದರ್ಶನ ಕಾಣುತ್ತಾ, ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ‘ಬಾಬ್ ಮಾರ್ಲಿ’ ಪದೇ ಪದೇ ನೋಡುವ ರಂಗ ಪ್ರಯೋಗವಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಹಿತಿ ಎಸ್‌.ನಟರಾಜ ಬೂದಾಳು, ‘ಜಂಗಮ ಕಲೆಕ್ಟಿವ್‌ ರಂಗಭೂಮಿಗೆ ಅಸ್ಮಿತೆಯ ಲೋಕ ಪರಿಚಯಿಸುತ್ತಿದೆ. ‘ದಕ್ಲಾಕಥಾ ದೇವಿ’ ಮೂಲಕ ರಂಗಭೂಮಿಗೆ ಸಂಚಲನ ನೀಡಿದ ತಂಡ ‘ಬಾಬ್ ಮಾರ್ಲಿ’ ಮೂಲಕ ಮತ್ತಷ್ಟು ವಿಸ್ತರಿಸಿಕೊಂಡಿದೆ’ ಎಂದು ತಿಳಿಸಿದರು.

ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ಬಾಬ್ ಮಾರ್ಲಿ ನಗುತ್ತಲೇ ಸಮಾಜದ ಅಳುವನ್ನು ಹೊರ ಹಾಕಿದೆ. ರಂಗಭೂಮಿ ಶಕ್ತಿಯನ್ನು ಸಶಕ್ತವಾಗಿ ಬಳಸಿಕೊಳ್ಳುತ್ತಿದೆ. ಪ್ರಸ್ತುತದ ಯುವ ಸಮೂಹ ರಂಗ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ಮಾತ್ರ ಜಾತ್ಯತೀತ ಮನೋಭಾವನೆ ಹೆಚ್ಚಲಿದೆ’ ಎಂದರು.

ಚಿಂತಕ ಕೆ.ದೊರೈರಾಜು, ಸಾಹಿತಿ ಪ್ರೊ.ರಹಮತ್‌ ತರೀಕೆರೆ, ಲೇಖಕ ಜಿ.ವಿ.ಆನಂದಮೂರ್ತಿ, ಹರಿಕಥಾ ವಿದ್ವಾನ್‌ ಲಕ್ಷ್ಮಣ್‌ದಾಸ್, ವಿ.ವಿಯ ಪ್ರಾಧ್ಯಾಪಕರಾದ ನಿತ್ಯಾನಂದ ಬಿ.ಶೆಟ್ಟಿ, ಪ್ರೊ.ನಾಗಭೂಷಣ ಬಗ್ಗನಡು, ವಿಮರ್ಶಕ ರವಿಕುಮಾರ್ ನೀಹ, ರಂಗ ನಿರ್ದೇಶಕ ಹೊನ್ನವಳ್ಳಿ ನಟರಾಜ್, ಮುಖಂಡರಾದ ತುಂಬಾಡಿ ರಾಮಯ್ಯ, ಎಸ್.ಶಿವಕುಮಾರ್, ಡಿ.ಟಿ.ವೆಂಕಟೇಶ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಕುಂದೂರು ಮುರುಳಿ, ಪತ್ರಕರ್ತರಾದ ಎಸ್‌.ನಾಗಣ್ಣ, ಉಗಮ ಶ್ರೀನಿವಾಸ್‌ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.