ADVERTISEMENT

ಹೊನ್ನುಡಿಕೆ ಬಳಿ ಬೊಲೆರೊ ಡಿಕ್ಕಿ: ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:07 IST
Last Updated 16 ಡಿಸೆಂಬರ್ 2025, 5:07 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ತುಮಕೂರು: ತಾಲ್ಲೂಕಿನ ಹೊನ್ನುಡಿಕೆ ಬಳಿ ಸೋಮವಾರ ಬೈಕ್‌ಗೆ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್‌ ಸವಾರ ಕಿರಣ್‌ (20) ಮೃತಪಟ್ಟಿದ್ದಾರೆ.

ADVERTISEMENT

ಕಿರಣ್ ಮಾಗಡಿ ತಾಲ್ಲೂಕು ಕುದೂರು ಬಳಿಯ ಶ್ರೀಗಿರಿಪುರದ ನಿವಾಸಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ವಗ್ರಾಮದಿಂದ ಹೊನ್ನುಡಿಕೆ ಮಾರ್ಗವಾಗಿ ನಗರದ ಕಡೆಗೆ ಬರುವಾಗ ನಗರದಿಂದ ತೆರಳುತ್ತಿದ್ದ ಬೊಲೆರೊ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.