
ಪ್ರಜಾವಾಣಿ ವಾರ್ತೆ
ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಪ್ರಾಥಮಿಕ ಪತ್ತಿನ ಸಹಕಾರ ಸಂಘದ (ವಿಎಸ್ಎಸ್ಎನ್) ಆಡಳಿತ ಮಂಡಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗದಿಂದ ಶಾಂತಕುಮಾರ್ ಬಿ.ಜೆ, ರೇವಣ್ಣ ಪಿ, ಚನ್ನಕೇಶವ ಸಿ., ಬಿ.ಆರ್.ಎಂ.ಸತ್ಯನಾರಾಯಣ, ಬಂಡೆ ರಾಮಣ್ಣ, ಮಹಿಳಾ ಮೀಸಲು ಕಮಲಮ್ಮ, ಸುಜಾತಾ ಟಿ.ಎಸ್., ಹಿಂದುಳಿದ ವರ್ಗ ‘ಬಿ’ ಹೊಸಪಾಳ್ಯ ಸತ್ಯನಾರಾಯಣ, ಹಿಂದುಳಿದ ವರ್ಗ ‘ಎ’ ಮೇಣಿಗನಹಟ್ಟಿ ಜಯಣ್ಣ ಎಂ.ಎಸ್., ಪರಿಶಿಷ್ಟ ಪಂಗಡ ನಂಜುಂಡಪ್ಪ, ಪರಿಶಿಷ್ಟ ಜಾತಿ ಗೋವಿಂದಪ್ಪ ಹಾಗೂ ಸಾಲಾಗಾರರಲ್ಲದ ಕ್ಷೇತ್ರದಿಂದ ಹುಣಸೆಕಟ್ಟೆ ಗುರುರಾಜು ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.