ADVERTISEMENT

ಗುಬ್ಬಿ | ಬೈಕ್‌ಗೆ ಬಸ್‌ ಡಿಕ್ಕಿ: ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 2 ಜುಲೈ 2023, 15:42 IST
Last Updated 2 ಜುಲೈ 2023, 15:42 IST

ಗುಬ್ಬಿ: ತಾಲ್ಲೂಕಿನ ಪತ್ರೆಮತ್ತಿಘಟ್ಟದ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ತುಮಕೂರು ತಾಲ್ಲೂಕು ಅರಸಪ್ಪನ ಛತ್ರದ ವೀರಣ್ಣ (70) ಮೃತಪಟ್ಟಿದ್ದಾರೆ.

ಎರಡೂ ವಾಹನಗಳು ನಿಟ್ಟೂರು ಕಡೆಯಿಂದ ಬರುತ್ತಿದ್ದವು. ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಪತ್ರೆಮತ್ತಿಘಟ್ಟದ ಬಳಿ ಗುಬ್ಬಿಯ ಕಡೆ ತಿರುಗಿಕೊಳ್ಳುವಾಗ ಬಸ್‌ ಡಿಕ್ಕಿಯಾಗಿದೆ.

ವೀರಣ್ಣ ಅವರ ಮೊಮ್ಮಗ ಸುಮಂತ್ (24) ಹಾಗೂ ನಿಟ್ಟೂರು ಹೋಬಳಿ ಬಾಗೂರು ಗೇಟಿನ ಧನಂಜಯ (35) ಗಾಯಗೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.