ಪಾವಗಡ: ಪಟ್ಟಣದ ಪೆನುಗೊಂಡ ರಸ್ತೆ ಬಳಿ ಬುಧವಾರ ಕಾರಿನ ಮುಂಭಾಗ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಬೆಂಕಿನಂದಿಸಿ ಅನಾಹುತ ತಪ್ಪಿಸಲಾಗಿದೆ.
ತಾಲ್ಲೂಕಿನ ಗ್ಯಾದಿಗುಂಟೆ ಗ್ರಾಮದ ವೆಂಕಟರಮಣಪ್ಪ ಎಂಬುವರು ಕಾರಿಗೆ ಪೆನುಗೊಂಡ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಪೆಟ್ರೋಲ್ ಬಂಕ್ ಸಮೀಪದಲ್ಲಿಯೇ ಕಾರಿನ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದವರು ಹೊರ ಬಂದಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಹಳೆಯದಾದ ಕಾರಿನ ಬ್ಯಾಟರಿ ಹಾಳಾಗಿ ಶಾರ್ಟ್‌ಸರ್ಕಿಟ್ ಉಂಟಾಗಿದೆ. ಕಾರಿನ ಎಂಜಿನ್ ಇತ್ಯಾದಿ ಭಾಗಗಳು ಸುಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.