ADVERTISEMENT

ಬಯಲುಸೀಮೆಯಲ್ಲಿ ಬೆಕ್ಕಿನ ಕಣ್ಣಿನ ಹಾವು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 18:14 IST
Last Updated 3 ಡಿಸೆಂಬರ್ 2022, 18:14 IST
ಬೆಕ್ಕಿನ ಕಣ್ಣಿನ ಹಾವು
ಬೆಕ್ಕಿನ ಕಣ್ಣಿನ ಹಾವು   

ಕೊರಟಗೆರೆ (ತುಮಕೂರು): ತಾಲ್ಲೂಕಿನ ತಣ್ಣೇನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಬೆಕ್ಕಿನ ಕಣ್ಣಿನ ಹಾವು (ಕ್ಯಾಟ್‌ ಸ್ನೇಕ್‌/ಕ್ಯಾಟ್‌ ಐಯ್ಡ್‌ ಸ್ನೇಕ್‌) ಪತ್ತೆಯಾಗಿದೆ.

ಬೆಂಗಳೂರು ನಿವಾಸಿ ಮುರಳೀಧರ್‌ ಎಂಬುವರಿಗೆ ಸೇರಿದ ತಣ್ಣೇನಹಳ್ಳಿ ತೋಟದ ಮನೆಯಲ್ಲಿ ಇಟ್ಟಿದ್ದ ಪೆಟ್ಟಿಗೆಯಲ್ಲಿಶುಕ್ರವಾರ ಸಂಜೆ ಈ ಹಾವು ಪತ್ತೆಯಾಗಿದೆ. ಕೂಡಲೇ ಅವರು ವಾರಂಗಲ್ ಫೌಂಡೇಷನ್‌ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣೆ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ಉರಗ ಪ್ರೇಮಿದಿಲೀಪ್ ಹಾವನ್ನು ಹಿಡಿದು ಜಿಲ್ಲೆಯ ದೇವರಾಯನ ದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಸಾಮಾನ್ಯವಾಗಿ ಪಶ್ಚಿಮ ಘಟ್ಟದತಪ್ಪಲು ಪ್ರದೇಶದಲ್ಲಿ ಕಂಡು ಬರುವ ಈ ಹಾವು ಬಯಲುಸೀಮೆಯಲ್ಲಿ ಕಾಣಸಿಗುವುದು ಅಪರೂಪ. ಹಿಂಬದಿ ಕೋರೆ ಹಲ್ಲು ಹೊಂದಿರುವ ಈ ಹಾವು ಅಷ್ಟೇನೂ ವಿಷಕಾರಿಯಲ್ಲ.

ADVERTISEMENT

‘ಬೊಯ್ಗಾ ಫಾರ್ಸ್ಟೆನ್‌’ ವೈಜ್ಞಾನಿಕ ಹೆಸರಿನ ಹಾವನ್ನು ಇಂಗ್ಲಿಷ್‌ನಲ್ಲಿ ಕ್ಯಾಟ್‌ ಸ್ನೇಕ್‌, ಕ್ಯಾಟ್ ಐಯ್ಡ್‌ ಸ್ನೆಕ್,ಫಾರ್ಸ್ಟೆನ್‌ ಕ್ಯಾಟ್ ಸ್ನೇಕ್‌ ಮತ್ತು ಕನ್ನಡದಲ್ಲಿ ‘ಬೆಕ್ಕಿನ ಕಣ್ಣಿನ ಹಾವು’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಈ ಹಾವು ಕಂಡು ಬರುತ್ತವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.