ADVERTISEMENT

ವಿಶ್ವ ಮಾನಸಿಕ ಆರೋಗ್ಯ ದಿನ: ಕೋವಿಡ್‌ ನಂತರ ಹೆಚ್ಚಿದ ಆರೋಗ್ಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2023, 16:24 IST
Last Updated 13 ಅಕ್ಟೋಬರ್ 2023, 16:24 IST
<div class="paragraphs"><p>ತುಮಕೂರಿನಲ್ಲಿ ಈಚೆಗೆ&nbsp;ರೋಟರಿ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ.ಲೋಕೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು.</p></div>

ತುಮಕೂರಿನಲ್ಲಿ ಈಚೆಗೆ ರೋಟರಿ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ.ಲೋಕೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು.

   

ತುಮಕೂರು: ಕೋವಿಡ್‌ ನಂತರ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮಾನಸಿಕ ಒತ್ತಡ, ಆತಂಕ ಅನಾರೋಗ್ಯಕ್ಕೆ ಕಾರಣ ಎಂದು ಮನೋವೈದ್ಯ ಡಾ.ಲೋಕೇಶ್ ಬಾಬು ಹೇಳಿದರು.

ನಗರದಲ್ಲಿ ಈಚೆಗೆ ರೋಟರಿ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮಲ್ಲಿ ‘ನಾನು’ ಎಂಬ ಭಾವನೆ ಹೆಚ್ಚಾಗುತ್ತಿದ್ದು, ದುಃಖ ಮತ್ತು ನೋವುಗಳಿಗೂ ಕಾರಣವಾಗುತ್ತಿದೆ ಎಂದರು.

ADVERTISEMENT

ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ವಿಪರೀತ ಕಾಳಜಿ ತೆಗೆದುಕೊಂಡು ಅನಗತ್ಯ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಆತಂಕವು ಭಯವಾಗಿ ಕಾಡಲಾರಂಭಿಸುತ್ತದೆ. ಇದೇ ಸ್ಥಿತಿಯಿಂದ ಕ್ರಮೇಣ ಪ್ರತಿ ಸಣ್ಣ ವಿಷಯಗಳಿಗೂ ಭಯ ಪಡುವಂತಾಗುತ್ತದೆ. ಪೋಷಕರ ಪರಿಸ್ಥಿತಿ ಮಕ್ಕಳಲ್ಲೂ ಭಯ ಹುಟ್ಟಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರೋಟರಿ ಅಧ್ಯಕ್ಷ ಸಿ.ನಾಗರಾಜ್‌, ‘ಪ್ರಸ್ತುತ ಸಾರ್ವಜನಿಕರಲ್ಲಿ ಸಂಯಮ, ಸಮಾಧಾನ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅನಗತ್ಯವಾಗಿ ಕೋಪಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ತಿಳಿಸಿದರು.

ಇನ್ನರ್ ವ್ಹೀಲ್‌ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್‌, ರೋಟರಿ ಪ್ರಮುಖರಾದ ಹೇಮಾ ಮಲ್ಲಿಕ್, ಕಾಂತಿಲಾಲ್‌, ಮಲ್ಲೇಶ್‌, ಎಸ್.ಎಲ್.ಕಾಡದೇವರಮಠ್, ನಾಗೇಶ್‌ಕುಮಾರ್, ಎನ್.ಮಹೇಶ್, ಸುರೇಶ್ ಬಾಬು, ಅನಿತಾ ನಾಗೇಶ್, ಅನಿತಾ ಸುಧೀರ್, ರಘು, ಎಂ.ಆರ್.ಶೇಖರ್‌ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.