ADVERTISEMENT

ತುಮಕೂರು: ಸ್ವಚ್ಛಗೊಂಡ ಎಡೆಯೂರು ಕಲ್ಯಾಣಿ

ವಿದ್ಯಾರ್ಥಿಗಳು, ದೇಗುಲದ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ

ಟಿ.ಎಚ್.ಗುರುಚರಣ್ ಸಿಂಗ್
Published 13 ಮಾರ್ಚ್ 2021, 4:13 IST
Last Updated 13 ಮಾರ್ಚ್ 2021, 4:13 IST
ಕುಣಿಗಲ್ ತಾಲ್ಲೂಕು ಎಡೆಯೂರಿನಲ್ಲಿನ ಕಲ್ಯಾಣಿ ಸ್ವಚ್ಛತೆಯಲ್ಲಿ ನಿರತರಾಗಿದ್ದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು
ಕುಣಿಗಲ್ ತಾಲ್ಲೂಕು ಎಡೆಯೂರಿನಲ್ಲಿನ ಕಲ್ಯಾಣಿ ಸ್ವಚ್ಛತೆಯಲ್ಲಿ ನಿರತರಾಗಿದ್ದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು   

ಕುಣಿಗಲ್: ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಎಡೆಯೂರಿನಲ್ಲಿದ್ದ ಪುರಾತನ ಕಲ್ಯಾಣಿಯು ತ್ಯಾಜ್ಯವಸ್ತುಗಳ ಸಂಗ್ರಹ ಕೇಂದ್ರವಾಗಿದ್ದು, ದೇವಾಲಯದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ.

500 ವರ್ಷಗಳ ಹಿಂದೆ ಈ ಕಲ್ಯಾಣಿ ನಿರ್ಮಾಣವಾಗಿದೆ. ಕಳೆದ ಹತ್ತು ವರ್ಷಗಳಿಂದ ನೀರಿಲ್ಲದ ಕಾರಣ ಒಣಗಿಹೋಗಿದ್ದು, ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಪರಿವರ್ತನೆಗೊಂಡಿತ್ತು.

ಕಲ್ಯಾಣಿಯ ಬಗ್ಗೆ ಗಮನ ಹರಿಸಿದ ದೇವಾಲಯದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಸ್ವಚ್ಛತೆಗೆ ಮುಂದಾದರು. ಅಧಿಕಾರಿಯ ನಿರ್ಣಯಕ್ಕೆ 85 ಸಿಬ್ಬಂದಿ ಮತ್ತು ದೇವಾಲಯದ ಆಡಳಿತಕ್ಕೊಳಪಟ್ಟಿರುವ ಸಂಸ್ಕೃತ ಪಾಠಶಾಲೆ, ಪದವಿಪೂರ್ವ ಕಾಲೇಜಿನ 300 ವಿದ್ಯಾರ್ಥಿಗಳು ಕೈ ಜೋಡಿಸಿ ಕಳೆದ ಫೆಬ್ರುವರಿ ಒಂದರಂದು ಸ್ವಚ್ಛತೆ ಪ್ರಾರಂಭಿಸಿದ್ದು, ಈಗ ಪೂರ್ಣಗೊಂಡಿದೆ.

ADVERTISEMENT

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ, ಕಲ್ಯಾಣಿಯನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಶ್ರಮದಾನದಿಂದ ಸ್ವಚ್ಛಗೊಳಿಸುವುದು ಸಂತೋಷ ತಂದಿದೆ ಎಂದು ಲಕ್ಷ್ಮಿ ತಿಳಿಸಿದ್ದಾರೆ.

ಕಲ್ಯಾಣಿಯ ಸ್ವಚ್ಛತೆಯಿಂದಾಗಿ ಜಲಮೂಲಗಳಿಂದ ನೀರು ಜಿನುಗಿ ಮತ್ತು ಮಾರ್ಕೋನಹಳ್ಳಿ ಜಲಾಶಯದ ನೀರು ಸೇರಿ ಕಲ್ಯಾಣಿ ಭಕ್ತರನ್ನು ಆಕರ್ಷಿಸುತ್ತಿದೆ. ಕಲ್ಯಾಣಿಯಲ್ಲಿ ಸಾವಿರಕ್ಕೂ ಹೆಚ್ಚು ಮೀನು ಮತ್ತು ಆಮೆಗಳನ್ನು ಬಿಡಲಾಗಿದೆ ಎಂದು ಶರಣ್ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಡಿ.ಗ್ರೂಫ್ ನೌಕರರಾಗಿ ಕಳೆದ 30 ವರ್ಷಗಳಿಂದ ಕೆಲಸ ಮಾಡಿರುವೆ ಕಲ್ಯಾಣಿ ಸ್ವಚ್ಛತೆಯಲ್ಲಿ ಭಾಗಿಯಾಗಿ ನವೀಕರಣಗೊಳಿಸಲು ಹಾಕಿದ ಶ್ರಮ ಸಾರ್ಥಕವಾಗಿದೆ ಮತ್ತು ನೆಮ್ಮದಿ ತಂದಿದೆ ಎಂದು ಸಿಬ್ಬಂದಿ ಕೆಂಪೇಗೌಡ ಮತ್ತು ಮಲ್ಲಿಕಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.