ತಿಪಟೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೋಮವಾರ ರಾತ್ರಿ ಕಳ್ಳರು ಲಕ್ಷಾಂತರ ಮೌಲ್ಯದ ಸುಮಾರು 3,635 ಕೆ.ಜಿ. ಕೊಬ್ಬರಿ ಕಳ್ಳತನ ಮಾಡಿದ್ದಾರೆ.
ಎಪಿಎಂಸಿ ಮಾರುಕಟ್ಟೆಯ ಮುಖ್ಯದ್ವಾರದ ಬೀಗ ಒಡೆದು ಕಳ್ಳರು ಘಟಕಿನಕೆರೆ ಮೂಲದ ನಾಗರಾಜ್ ಎಂಬುವರ ಮಾಲಿಕತ್ವದ ಗಂಗಾ ಟ್ರೇಡರ್ಸ್‌ನ ಕಾಂಪೌಂಡ್ ಹಾಗೂ ಅಂಗಡಿ ಬಾಗಿಲು ಬೀಗ ಮುರಿದು ಕೊಬ್ಬರಿ ಕಳ್ಳತನ ಮಾಡಿದ್ದಾರೆ.
ಕಾವಲುಗಾರರ ಕಣ್ಣುತಪ್ಪಿಸಿ ಕಳವು ಮಾಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳ್ಳರು ಚಾಕು ಹಾಗೂ ಖಾರದ ಪುಡಿ ತಂದಿದ್ದು ಚೆಲ್ಲಿ ಹೋಗಿದ್ದಾರೆ.
ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು, ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ನಗರಠಾಣೆಯ ವೆಂಕಟೇಶ್, ಕೃಷ್ಣಪ್ಪ ಭೇಟಿ ನೀಡಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.