ADVERTISEMENT

ಚಾಕುವಿನಿಂದ ಹಲ್ಲೆ: ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
 ಹಲ್ಲೆ (ಸಾಂದರ್ಭಿಕ ಚಿತ್ರ)
ಹಲ್ಲೆ (ಸಾಂದರ್ಭಿಕ ಚಿತ್ರ)   

ಕುಣಿಗಲ್: ತಾಲ್ಲೂಕಿನ ನಡೆಮಾವಿನಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ವೆಂಕಟೇಗೌಡನಪಾಳ್ಯದ ಕೀರ್ತಿ ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪಂಚಾಯಿತಿ ಪಕ್ಕದಲ್ಲಿರುವ ಟೀ ಅಂಗಡಿ ಬಳಿ ನಿಂತಿದ್ದ ತಮ್ಮ ಮೇಲೆ ಮೈತ್ರಿ ಕಾರ್ಯಕರ್ತರಾದ ನಡೆಮಾವಿನಪುರ ಅಣೆ ಚಂದ್ರ, ಸುನಿಲ್ ಮತ್ತು ಕಲ್ಲೆಗೌಡನಪಾಳ್ಯದ ಜಗದೀಶ್ ಎಂಬುವರು ಚಾಕುವಿನಿಂದ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೀರ್ತಿ ಅವರನ್ನು ಸ್ಥಳೀಯರು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.